Select Your Language

Notifications

webdunia
webdunia
webdunia
Wednesday, 9 April 2025
webdunia

ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ಕೊರೊನಾ ಕಣ್ಣು!

ಕೊರೊನಾ
ಬೆಂಗಳೂರು , ಭಾನುವಾರ, 28 ನವೆಂಬರ್ 2021 (08:37 IST)
ಬೆಂಗಳೂರು : ಅಬ್ಬರಿಸಿ ಕೊಂಚ ಸುಮ್ಮನಾಗಿದ್ದ ಮಾಹಾಮಾರಿ ಕೊರೊನಾ ಈಗ ಮತ್ತೆ ಕಾಣಿಸಿಕೊಳ್ಳುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಅದರಲ್ಲೂ ಆನೇಕಲ್ ಸುತ್ತಮುತ್ತ ಕೊರೊನಾ ಹೆಚ್ಚಾಗುತ್ತಿದ್ದು ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ. ಆನೇಕಲ್ ಬಳಿಯ ಮರಸೂರಿನ ನರ್ಸಿಂಗ್ ಕಾಲೇಜು ಮತ್ತು ದೊಮ್ಮಸಂದ್ರದ ಟಿಐಎಸ್‌ಬಿಯಲ್ಲಿ ಪತ್ತೆಯಾದ ಕೇಸ್ಗಳು ಅಧಿಕಾರಿಗಳಿಗೆ ತಲೆನೋವು ತಂದಿದೆ.
ಆನೇಕಲ್ ಬಳಿಯ ಮರಸೂರಿನ ಸ್ಫೂರ್ತಿ ನರ್ಸಿಂಗ್ ಕಾಲೇಜಿನಲ್ಲಿ 17 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೂ ದೊಮ್ಮಸಂದ್ರದ ಟಿಐಎಸ್‌ಬಿಯಲ್ಲಿ 34 ಪ್ರಕರಣ ಪತ್ತೆಯಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಬಾಕಿ ಇದೆ. ಆನೇಕಲ್ ತಾಲೂಕು ಸೂಕ್ಷ್ಮವಲಯ ಎಂದು ಪರಿಗಣಸಲಾಗಿದ್ದು ಕಟ್ಟುನಿಟ್ಟಾಗಿ ಕೊವಿಡ್ ನಿಯಮ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ.
-ಶಾಲೆಯಲ್ಲಿ ಕಡ್ಡಾಯವಾಗಿ ನೋಡಲ್ ಅಧಿಕಾರಿ ನೇಮಕಕ್ಕೆ ಸೂಚನೆ
-ನೋಡಲ್ ಅಧಿಕಾರಿಯಿಂದ ಕಾಲಕಾಲಕ್ಕೆ ಪರಿಶೀಲನೆ
-ದಿನದ 24 ಗಂಟೆ 7 ದಿನಗಳು ಮೆಡಿಕಲ್ ಆಫೀಸರ್ ಹಾಗೂ ಸ್ಟಾಫ್ ನರ್ಸ್ ನಿಯೋಜನೆ ಮಾಡಲು ಸೂಚನೆ
-ಆಕ್ಸಿಮೀಟರ್, ಥರ್ಮಾಮೀಟರ್ ಕಾಲಕಾಲಕ್ಕೆ ಬಳಸಲು ಸಲಹೆ
-ಸಮೀಪದ ಆರೋಗ್ಯ ಕೇಂದ್ರದ ನಿರಂತರ ಸಂಪರ್ಕದಲ್ಲಿರಲು ಸೂಚನೆ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸಲಹೆ
-ಶಾಲೆಯಲ್ಲಿ ಪತ್ತೆಯಾದ ಸೋಂಕಿತರ ಸ್ಯಾಂಪಲ್ ಗಳು ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲು ಸೂಚನೆ


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಕೈಕೊಟ್ಟ ಪತಿ!