ಗಡಿ ದಾಟಿದ ಕೊರೋನಾ ಸಾವು!

Webdunia
ಶನಿವಾರ, 5 ಫೆಬ್ರವರಿ 2022 (13:19 IST)
ನವದೆಹಲಿ : ಭಾರತದಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ.
 
ಈ ಮೂಲಕ ಅಮೆರಿಕ, ಬ್ರೆಜಿಲ್‌ ಬಳಿಕ ಕೋವಿಡ್‌ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾಚ್‌ರ್‍ 10ರಂದು ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿತ್ತು.

ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ.

ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.

ದೇಶ, ಸಾವು: ಅಮೆರಿಕ 9.2 ಲಕ್ಷ, ಬ್ರೆಜಿಲ್‌ 6.3 ಲಕ್ಷ, ಭಾರತ 5 ಲಕ್ಷ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಕ್ರೀದ್‌ ಹಬ್ಬ: ಗೋಹತ್ಯೆ, ಅಕ್ರಮ ಮಾಂಸ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಎಬೋಲಾ ಪ್ರಕರಣದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಚಿವ ದಿನೇಶ್ ಗುಂಡೂರಾವ್‌

ಮಾಜಿ ರೌಡಿಶೀಟರ್‌ ತಲೆ ಮೇಲೆ ಕೈಯಿಟ್ಟು ಆಶೀರ್ವಾದಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಹೊಸ ವಿವಾದದಲ್ಲಿ

ಸಿಎಂ ಸ್ಥಾನಕ್ಕೆ ರಾಜೀನಾಮೆ ಗುಸುಗುಸು ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮಹತ್ವದ ಸಂದೇಶ ಬರೆದ ಸಿದ್ದರಾಮಯ್ಯ

ರಾಜೀನಾಮೆ ಕೊಡಲು ಮುಂದಾದ ಸಿಎಂ ಸಿದ್ದರಾಮಯ್ಯಗೆ ಎದುರಾಗಿದೆ ಆ ಒಂದು ಕಂಟಕ

ಮುಂದಿನ ಸುದ್ದಿ
Show comments