Select Your Language

Notifications

webdunia
webdunia
webdunia
webdunia

ಉಮೇಶ್ ಕತ್ತಿ ನಿಧನಕ್ಕೆ ಆರಗ ಸಂತಾಪ

webdunia
ತುಮಕೂರು , ಬುಧವಾರ, 7 ಸೆಪ್ಟಂಬರ್ 2022 (11:05 IST)
ತುಮಕೂರು : ಸಚಿವ ಉಮೇಶ್ ಕತ್ತಿಯವರು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು ಎಂದು ಹೇಳುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನಿಧನ ಅತ್ಯಂತ ದುಖವಾಗಿದೆ. ನನ್ನ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಅನಾರೋಗ್ಯದ ಕಾರಣ ಕಳೆದ ಕ್ಯಾಬಿನೆಟ್ ಗೆ ಅವರು ಹಾಜರಾಗಿರಲಿಲ್ಲ ಎಂದರು. 

ಅತ್ಯಂತ ಒಳ್ಳೆಯವರು ಮತ್ತು ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕೊಡಲಿ.
ಅವರ ನಿಧನದಿಂದ ನನ್ನ ಎಲ್ಲಾ ಕೆಲಸ ಕಾರ್ಯ ರದ್ದು ಮಾಡಿದ್ದೇನೆ. ಜನೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯರು ನಿರ್ಧರಿಸುತ್ತಾರೆ ಎಂದು ಆರಗ ತಿಳಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಕತ್ತಿ ನೆನೆದು ಕಣ್ಣೀರಿಟ್ಟ ಬೊಮ್ಮಾಯಿ