Select Your Language

Notifications

webdunia
webdunia
webdunia
webdunia

ಸಿಎಂ ಪಾಪದ ಮೂಟೆ ಹೆಚ್ಚಿದೆ, ಎಲ್ಲೇ ಹೋದ್ರೂ ಸೋಲು ಗ್ಯಾರಂಟಿ: ಶ್ರೀರಾಮುಲು

ಸಿಎಂ ಪಾಪದ ಮೂಟೆ ಹೆಚ್ಚಿದೆ, ಎಲ್ಲೇ ಹೋದ್ರೂ ಸೋಲು ಗ್ಯಾರಂಟಿ: ಶ್ರೀರಾಮುಲು
ಬಾಗಲಕೋಟೆ , ಶುಕ್ರವಾರ, 27 ಏಪ್ರಿಲ್ 2018 (14:15 IST)
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಿಎಂಗೆ ಎರಡೂ ಕ್ಷೇತ್ರದಲ್ಲೂ ಸೋಲಿನ ಭೀತಿ ಇದ್ದು, ಸಿಎಂ ಎಲ್ಲೇ ಹೋದ್ರೂ ಸೋಲು ಕಟ್ಟಿಟ್ಟದ್ದೇ ಎಂದು ಸಂಸದ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ರು.
ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣಕ್ಕೆ ಭೇಟಿ ನೀಡಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜಶೇಖರ ಶೀಲವಂತರ ನಿವಾಸಕ್ಕೆ ಭೇಟಿ ನೀಡಿದ್ರು.
 
 ಈ ವೇಳೆ ಬಾದಾಮಿ ಮತಕ್ಷೇತ್ರದಲ್ಲಿ ಅಸಮಾಧಾನಗೊಂಡಿದ್ದ ನಾಯಕರೊಂದಿಗೆ ಮಾತುಕತೆ ನಡೆಸಿ ಅಸಮಾಧಾನ ಶಮನಗೊಳಿಸಿ, ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯೋದಾಗಿ ಹೇಳಿದ್ರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದ ಶ್ರೀರಾಮುಲು ನೀನೆ ಎಲ್ಲೇ ಹೋದ್ರೂ ಸೋಲು ಗ್ಯಾರಂಟಿ ಎಂದ್ರು.
 
 ಇನ್ನು ಸಿದ್ದರಾಮಯ್ಯನವರ ಜಾತಿ ಲೆಕ್ಕಾಚಾರ ಇಲ್ಲಿ ನಡೆಯೋದಿಲ್ಲ ಎಂದ ಅವರು, ಜನಾರ್ಧನ ರೆಡ್ಡಿ ಅವರು ಪ್ರಚಾರಕ್ಕೆ ಬರೋದು ಗೊತ್ತಿಲ್ಲ, ಸಿದ್ದರಾಮಯ್ಯ ತಮ್ಮ ಆಡಳಿತ ಅವಧಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಿಲ್ಲ, ಮಾಡಿದ್ರೆ ಜನ್ರು ಕೆಂಪು ಹಾಸಿಗೆ ಹಾಸಿ ಕರೆಯುತ್ತಿದ್ದರು. ಹೀಗಾಗಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸೋಲು ಅನುಭವಿಸಲಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ರಾಹುಲ್ ಗಾಂಧಿ ಪ್ರವಾಸ