Publish Date: Fri, 27 Apr 2018 (09:45 IST)
Updated Date: Fri, 27 Apr 2018 (09:47 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್ ಮಾಡಿದ ಎಡವಟ್ಟು ಇದೀಗ ಗಂಭೀರ ಸ್ವರೂಪಕ್ಕೆ ತಿರುಗಿದೆ.
ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನದ ಪೈಲಟ್ ಎಡವಟ್ಟಿನಿಂದಾಗಿ ಕೆಲವು ಕಾಲ ರಾಡರ್ ಸಂಪರ್ಕಕ್ಕೆ ಸಿಗದೇ ಹೋಗಿತ್ತು. ಇದರ ಬಗ್ಗೆ ಇದೀಗ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.
ಇದು ದುರುದ್ದೇಶಪೂರಿತ ಕೃತ್ಯವಾಗಿತ್ತು ಎಂದು ಕಾಂಗ್ರೆಸ್ ದೂರಿನಲ್ಲಿ ಹೇಳಿದೆ. ಪ್ರತಿಕೂಲ ವಾತಾವರಣ ಇಲ್ಲದೇ ಹೋದರೂ ಪೈಲಟ್ ಅತೀ ಎತ್ತರದಲ್ಲಿ ರಾಡರ್ ಸಂಪರ್ಕಕ್ಕೆ ಸಿಗದಷ್ಟು ಎತ್ತರದಲ್ಲಿ ವಿಮಾನ ಚಲಾಯಿಸಿದ್ದ ಎಂದು ದೂರಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.