Publish Date: Thu, 29 Mar 2018 (09:22 IST)
Updated Date: Thu, 29 Mar 2018 (12:57 IST)
ಬೆಂಗಳೂರು: ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿರುವುದರಿಂದ ಟಿಕೆಟ್ ಆಕಾಂಕ್ಷಿಗಳು ಮನೆ ಮುಂದೆ ಬಂದು ನಿಲ್ಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ನಾಲ್ಕು ದಿನಗಳ ಕಾಲ ಬಂಡೀಪುರದ ರೆಸಾರ್ಟ್ ಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಜತೆಗೆ ತಮ್ಮ ಆಪ್ತ ನಾಯಕರ ಜತೆಗೆ ಚುನಾವಣೆ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ಹಣಕಾಸಿನ ವಿಚಾರ, ಖರ್ಚು ವೆಚ್ಚದ ವಿವರಗಳನ್ನು, ಟಿಕೆಟ್ ಫೈನಲ್ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಕೆಲವೇ ಕೆಲವು ಆಪ್ತ ನಾಯಕರ ಜತೆಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಬಂಡೀಪುರದಲ್ಲಿರುವ ಸಿಎಂ ವಾಸ್ತವ್ಯವಿರುವ ರೆಸಾರ್ಟ್ ಗೆ ಅವರನ್ನು ಭೇಟಿ ಮಾಡಲು ಅವರು ಆಯ್ದ ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ