Select Your Language

Notifications

webdunia
webdunia
webdunia
webdunia

ನಾನು ಹೇಳೋದು ಸತ್ಯ ಸತ್ಯ ಎಂದುಬಿಟ್ಟರು ರಮ್ಯಾ! ಅದೇನದು?

ನಾನು ಹೇಳೋದು ಸತ್ಯ ಸತ್ಯ ಎಂದುಬಿಟ್ಟರು ರಮ್ಯಾ! ಅದೇನದು?
ಬೆಂಗಳೂರು , ಗುರುವಾರ, 29 ಮಾರ್ಚ್ 2018 (09:14 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಇತ್ತೀಚೆಗೆ ಪಕ್ಷದ ಬಗ್ಗೆ ಕೇಳಿಬರುತ್ತಿರುವ ಅಪವಾದವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಚುನಾವಣೆ ಗೆಲ್ಲಲು ಕ್ಯಾಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ನೆರವು ಪಡೆದಿದೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ.

ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ರಮ್ಯಾ, ನಾನು ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ಕಾಂಗ್ರೆಸ್ ಪಕ್ಷದ ಯಾವುದೇ ರೀತಿಯಲ್ಲೂ ಸ್ಥಳೀಯವಾಗಿಯೂ, ರಾಷ್ಟ್ರಮಟ್ಟದಲ್ಲಿಯೂ ಕ್ಯಾಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ನೆರವು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಸದಸ್ಯರ ಮಾಹಿತಿ ಕದ್ದು, ಜನರ ವೈಯಕ್ತಿಕ ಇಷ್ಟ, ವಿವರಗಳನ್ನು ತಿಳಿದು ಅದಕ್ಕೆ ತಕ್ಕ ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ ಸಲಹೆ ಕೊಡುವ ಕೆಲಸ ಕ್ಯಾಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಮಾಡುತ್ತದೆ. ಕಾಂಗ್ರೆಸ್ ಅದರ ನೆರವು ಪಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಪೇಟ ತೊಡಲು ನಿರಾಕರಿಸಿದ ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ