Select Your Language

Notifications

webdunia
webdunia
webdunia
webdunia

ಹಿಂದು ನಾಯಕರಾಗುವತ್ತ ರಾಹುಲ್ ಗಾಂಧಿ ಚಿತ್ತ: ಜೋಷಿ ಲೇವಡಿ

ರಾಹುಲ್ ಗಾಂಧಿ
ಬೆಂಗಳೂರು , ಬುಧವಾರ, 28 ಮಾರ್ಚ್ 2018 (20:56 IST)
ರಾಮನೇ ಇಲ್ಲ ಎಂದವರು ಇದೀಗ ರಾಜ್ಯದಲ್ಲಿ ಮಠ-ಮಾನ್ಯಗಳಿಗೆ ಭೇಟಿ ನೀಡಿ  ಹಿಂದೂ ಲೀಡರ್ ಆಗಲು ಹೊರಟಿರೋದು ವಿಪಯಾ೯ಸದ ಸಂಗತಿ ಎಂದು ರಾಹುಲ್ ಗಾಂಧಿ ವಿರುದ್ಧ ಸಂಸದ ಪ್ರಹ್ಲಾದ ಜೋಷಿ ವ್ಯಂಗ್ಯವಾಡಿದ್ದಾರೆ. 
ಬಾಗಲಕೋಟೆಯಲ್ಲಿ  ಮಾತನಾಡಿ, ಹಿಂದೆ ರಾಮಸೇತು ವಿಚಾರದಲ್ಲಿ ರಾಮನೇ ಇಲ್ಲ ಎಂದು ಯುಪಿಎ ಹೇಳಿತ್ತು. ಇಂದು ಅದ್ಹೇಗೆ ರಾಹುಲ್ ಮಠ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. 
 
ಸಿಎಂ ವೋಟ್ ಬ್ಯಾಂಕ್ ಗಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಈಗಾಗ್ಲೇ 1 ಲಕ್ಷ 42 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಆ ಹಣ ಎಲ್ಲಿ ಖರ್ಚು ಮಾಡಿದ್ದಾರೆ ಅಂತ ಗೊತ್ತಿಲ್ಲ. ಬಗ್ಗೆ ಅಮಿತ್ ಶಾ ಲೆಕ್ಕ ಕೇಳಿದ್ರೆ, ಲೆಕ್ಕ ಕೇಳಲು ಶಾ ಯಾರು ಅಂತಾರೆ, ರಾಜ್ಯ ಸಭೆ ಸದಸ್ಯರಾಗಿ ಲೆಕ್ಕ ಕೇಳುವ ಅಧಿಕಾರ ಅವ್ರಿಗಿದೆ. ತಾವು ಪ್ರಮಾಣಿಕರಾಗಿದ್ದರೇ, ರಾಜ್ಯದ ಜನತೆಗೆ ಲೆಕ್ಕ ಕೊಡಲಿ ಎಂದು ಸಿಎಂ ಸವಾಲ್ ಹಾಕಿದರು.
 
 ಯತ್ನಾಳ ಬಿಜೆಪಿಗೆ ಅನಿವಾರ್ಯನಾ ಎಂಬ  ಮಾದ್ಯಮದವ್ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಯತ್ನಾಳ ಸೇರ್ಪಡೆ ಅನಿವಾರ್ಯ ಅಂತೇನಿಲ್ಲ. ನಾನು ಅವರು ಪಕ್ಷ ಸೇರುವ ಬಗ್ಗೆ ಪರ ವಿರೋದ ಮಾತನಾಡಲ್ಲ ಎಂದೂ ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಪಕ್ಷದ ಹೈಕಮಾಂಡ್ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದ್ರು. ಇದೇ ವೇಳೆ ಅಮೀತ್ ಶಾ ಎರಡು ದಿನಗಳ ಉತ್ತರ ಕರ್ನಾಟಕ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ ಅವರು, ಮಾಚ೯ ೩ರಂದು ಬಾಗಲಕೋಟೆ, ಮುಧೋಳ ಶಿವಯೋಗಮಂದಿರದಲ್ಲಿ ಸಭೆ ನಡೆಸಲಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಈಸ್ಟರ್ ಹಬ್ಬಕ್ಕಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳು