Select Your Language

Notifications

webdunia
webdunia
webdunia
webdunia

ಈಸ್ಟರ್ ಹಬ್ಬಕ್ಕಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳು

ಈಸ್ಟರ್ ಹಬ್ಬಕ್ಕಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳು
ಬೆಂಗಳೂರು , ಬುಧವಾರ, 28 ಮಾರ್ಚ್ 2018 (20:31 IST)
ಕ್ರೈಸ್ತರ ಹಬ್ಬವನ್ನು ಕೇವಲ ಕ್ರಿಶ್ಚಿಯನ್ನರು ಮಾತ್ರ ಆಚರಿಸದೆ ಎಲ್ಲಾ ಸಮುದಾಯದವರನ್ನು ಆಕರ್ಷಿಸುತ್ತದೆ. ಈಸ್ಟರ್ ಹಬ್ಬಕ್ಕಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸಿದ್ದಪಡಿಸಲಾಗುತ್ತದೆ.  
ಈಸ್ಟರ್ ಹಬ್ಬದ ಸಂದರ್ಭದಲ್ಲಿ ಈಸ್ಟರ್ ಎಗ್ ಮತ್ತು ಬನ್ನೀಸ್‌ಗಳನ್ನು ಸಿದ್ದಪಡಿಸಲಾಗುತ್ತದೆ.ಚಾಕೊಲೇಟ್​ನಿಂದ ಸಿದ್ಧವಾಗಿರೋ ಎಗ್. ವಾವ್ ನೋಡಲು ತುಂಬಾ ಆಕರ್ಷಣಿಯವಾಗಿರುತ್ತದೆ.
 
ವಿಶ್ವದಾದ್ಯಂತ ಕ್ರೈಸ್ತ ಸಮುದಾಯದ ಜನತೆ ತಮ್ಮ ಆತ್ಮಿಯರಿಗೆ, ಸಂಬಂಧಿಕರಿಗೆ ಉಡುಗೊರೆಯಾಗಿ ಕೊಡಲು ಈಸ್ಟರ್ ಎಗ್ ಈಸ್ಟರ್ ಬನ್ನಿಸ್‌ಗಳನ್ನು ಕೊಡುತ್ತಾರೆ. ಈ ರೀತಿ ಉಡುಗೊರೆ ನೀಡಿದಲ್ಲಿ ಇತರರಿಗೆ ಸಂತಸವಾಗುತ್ತದೆ ಎನ್ನುವುದೇ ಮೂಲ ಕಾರಣ. 
 
ಈಸ್ಟರ್ ಹಬ್ಬದಂದು ಇತರರಿಗೆ ಉಡುಗೊರೆ ನೀಡಿದಲ್ಲಿ ಯೇಸು ಸಂತೃಪ್ತನಾಗುತ್ತಾನೆ ಎನ್ನುವ ನಂಬಿಕೆ ಕೂಡಾ ಮನೆ ಮಾಡಿದೆ.
 
ಈಸ್ಟರ್ ಕ್ರೈಸ್ತಧರ್ಮೀಯರ ಹಬ್ಬ. ಈಸ್ಟರ್ ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳು ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ನಲಿಯುತ್ತಾರೆ. ವಿವಿಧ ರೀತಿಯಲ್ಲಿ ಅಲಂಕರಣಗೊಂಡ ಮೊಟ್ಟೆಗಳನ್ನು ಪರಸ್ಪರ ವಿನಿಮಯ ಮಾಡುವುದು ಒಂದು ರೂಢಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೈಸ್ತ ಸಮುದಾಯದವರ ಪ್ರಮುಖ ಹಬ್ಬ ಈಸ್ಟರ್