Select Your Language

Notifications

webdunia
webdunia
webdunia
webdunia

ವಿವಾದದ ಬಳಿಕ ತಪ್ಪು ತಿದ್ದಿಕೊಂಡ ಸಿಎಂ ಕುಮಾರಸ್ವಾಮಿ

ವಿವಾದದ ಬಳಿಕ ತಪ್ಪು ತಿದ್ದಿಕೊಂಡ ಸಿಎಂ ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 29 ಮೇ 2018 (08:52 IST)
ಬೆಂಗಳೂರು: ನಾನು 6.5 ಕೋಟಿ ಜನರ ಹಂಗಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂಬ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

‘ನನಗೆ 6.5 ಕೋಟಿ ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ನನ್ನ  ಅಧಿಕಾರ ನನ್ನ ಸಹಭಾಗಿ ಪಕ್ಷದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲು ಹೊರಟಿದ್ದೆ ಅಷ್ಟೇ. ಮೈತ್ರಿ ಸರ್ಕಾರ ಯಶಸ್ವಿಯಾಗಬೇಕಾದರೆ ಇನ್ನೊಂದು ಪಕ್ಷದ ಸಹಕಾರ ಬೇಕಾಗುತ್ತದೆ. ನನ್ನ ಹೇಳಿಕೆಯ ಅರ್ಥವೂ ಇದೇ ಆಗಿತ್ತು’ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿಯ ಮೊದಲಿನ ಹೇಳಿಕೆಯಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಆಕ್ಷೇಪ ವ್ಯಕ್ತವಾಗಿತ್ತು. ಇದು ವಿವಾದವಾಗುತ್ತಿದ್ದಂತೆ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕಾಸು ಖಾತೆಗಾಗಿ ಡಿಕೆಶಿ, ಪರಮೇಶ್ವರ್, ಎಚ್ ಡಿಕೆ ನಡುವೆಯೇ ಫೈಟ್?!