Publish Date: Tue, 29 May 2018 (07:30 IST)
Updated Date: Tue, 29 May 2018 (07:32 IST)
ಬೆಂಗಳೂರು : ನಾನು ಕರ್ನಾಟಕದ ಜನರ ಮುಲಾಜಿನಲ್ಲಿಲ್ಲ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಬಿ.ಎಸ್. ಯಡಿಯೂರಪ್ಪ ಅವರು ಈ ಹೇಳಿಕೆ ನಾಡಿನ ಜನತೆಗೆ ಮಾಡಿದ ಅಪಚಾರ. ಹೀಗಾಗಿ ಅವರು ಯಾವ ಮುಲಾಜು ಇಲ್ಲದೆ ಜನರ ಕ್ಷಮೆಯಾಚಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
‘ರೈತರ ಸಾಲಮನ್ನಾಸಂಬಂಧ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಅವರು ಸಾಲಮನ್ನಾಗೆ ಒಂದು ವಾರದ ಕಾಲಾವಧಿ ಕೇಳಿದ್ದಾರೆ. ಒಂದು ವಾರ ಕಾಯುತ್ತೇವೆ, ಬಳಿಕ ಮತ್ತೆ ಹೋರಾಟ ನಡೆಸಲಿದ್ದೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ