Select Your Language

Notifications

webdunia
webdunia
webdunia
webdunia

ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನಾ ಪತ್ರಿಕೆ

ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನಾ ಪತ್ರಿಕೆ
ಬೀಜಿಂಗ್ , ಮಂಗಳವಾರ, 12 ಅಕ್ಟೋಬರ್ 2021 (07:34 IST)
ಬೀಜಿಂಗ್ : ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ.
Photo Courtesy: Google

'ತಾನು ಬಯಸಿದ ರೀತಿಯಲ್ಲಿ ಗಡಿಯನ್ನು ಹೊಂದಬಹುದು ಎಂದು ಭಾರತ ಬಯಸಬಾರದು. ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ, ಅದು ಖಂಡಿತವಾಗಿಯೂ ಸೋಲಲಿದೆ. ಯಾವುದೇ ರೀತಿಯ ರಾಜಕೀಯ ತಂತ್ರಗಾರಿಕೆ ಮತ್ತು ಒತ್ತಡವನ್ನು ಚೀನಾ ನಿರ್ಲಕ್ಷಿಸುತ್ತದೆ' ಎಂದು 'ಗ್ಲೋಬಲ್ ಟೈಮ್ಸ್' ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
'ಭಾರತದ ಜತೆಗಿನ ಗಡಿ ವಿವಾದ ನಿಭಾಯಿಸುವಲ್ಲಿ, ಚೀನಾ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಮೊದಲನೆಯದಾಗಿ, ಭಾರತವು ಏನೇ ಸಮಸ್ಯೆಗಳನ್ನು ಸೃಷ್ಟಿಸಿದರೂ ನಮ್ಮ ನಿಲುವಿಗೆ ನಾವು ಬದ್ಧರಾಗಿರಬೇಕು. ಚೀನಾದ ಪ್ರದೇಶವು ಎಂದಿದ್ದರೂ ಚೀನಾಕ್ಕೇ ಸೇರಿದ್ದು ಮತ್ತು ನಾವು ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಗಡಿ ವಿಚಾರದಲ್ಲಿ ಭಾರತ ಇನ್ನೂ ನಿದ್ರಾವಸ್ಥೆಯಲ್ಲಿದೆ. ಅದು ಎಚ್ಚರಗೊಳ್ಳುವ ವರೆಗೆ ನಾವು ಕಾಯಬಹುದು' ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
'ಭಾರತ ಹಾಗೂ ಚೀನಾ ದೀರ್ಘಾವಧಿಯ ಗಡಿ ಸಂಘರ್ಷವನ್ನು ತಾಳಿಕೊಳ್ಳಲು ಸಾಕಷ್ಟು ಸಾಮರ್ಥ್ಯ ಹೊಂದಿರುವ ಎರಡು ಮಹಾ ಶಕ್ತಿಗಳು ಎಂಬುದು ಚೀನಾ ಜನರಿಗೆ ತಿಳಿದಿದೆ. ಉಭಯ ರಾಷ್ಟ್ರಗಳು ವೈಮನಸ್ಸು ಹೊಂದುವುದು ವಿಷಾದನೀಯ. ಆದರೆ ಭಾರತಕ್ಕೆ ಅದುವೇ ಬೇಕಿದ್ದಲ್ಲಿ ಚೀನಾ ಕೂಡ ಕೊನೆಯ ವರೆಗೂ ಅದನ್ನೇ ಅನುಸರಿಸಲಿದೆ' ಎಂದು ಪತ್ರಿಕೆ ಉಲ್ಲೇಖಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ