Select Your Language

Notifications

webdunia
webdunia
webdunia
webdunia

ಮಕ್ಕಳ ಲಸಿಕೆ ನಾಳೆ ಬಿಡುಗಡೆ?

ಮಕ್ಕಳ ಲಸಿಕೆ ನಾಳೆ ಬಿಡುಗಡೆ?
ಹೊಸದಿಲ್ಲಿ , ಶುಕ್ರವಾರ, 1 ಅಕ್ಟೋಬರ್ 2021 (08:32 IST)
ಹೊಸದಿಲ್ಲಿ: ಕೊರೊನಾ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ 3 ಡೋಸ್ಗಳ ಝೈಕೋವ್-ಡಿ ಲಸಿಕೆಯನ್ನು ಶನಿವಾರ ಸರಕಾರ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.
Photo Courtesy: Google

12 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಝೈಕೋವ್-ಡಿ ಲಸಿಕೆ ಅಭಿವೃದ್ಧಿಪಡಿ ಸಲಾಗಿದೆ. ಇದು ಭಾರತದಲ್ಲಿ ಅನುಮತಿ ಪಡೆದ ಮೊದಲ “ಮಕ್ಕಳ ಲಸಿಕೆ’. ಇದು 3 ಡೋಸ್ಗಳ ಲಸಿಕೆಯಾಗಿದ್ದು, ಇದನ್ನು ನೀಡಲು ಸೂಜಿಯ ಆವಶ್ಯಕತೆ ಇರುವುದಿಲ್ಲ. ಈ ಲಸಿಕೆಯನ್ನು ನೀಡಲು ವಿಶೇಷ ಅಪ್ಲಿಕೇಟರ್ “ಫಾರ್ಮಾಜೆಟ್’ ಬಳಸಲಾಗುತ್ತದೆ. ಒಂದು ಡೋಸ್ ಝೈಕೋವ್-ಡಿ ಲಸಿಕೆ ನೀಡಿ 28 ದಿನಗಳಲ್ಲಿ 2ನೇ ಡೋಸ್ ಮತ್ತು 56ನೇ ದಿನದಲ್ಲಿ 3ನೇ ಡೋಸ್ ನೀಡಲಾಗುತ್ತದೆ. ಫಾರ್ಮಾಸುಟಿಕಲ್ ಕಂಪೆನಿ ಝೈಡಸ್ ಕ್ಯಾಡಿಲಾ ಮತ್ತು ಕೇಂದ್ರ ಸರಕಾರ ಲಸಿಕೆಯ ದರ ನಿಗದಿ ಕುರಿತು ಚರ್ಚಿಸು ತ್ತಿವೆ ಎಂದು ಮೂಲಗಳು ತಿಳಿಸಿವೆ.
ಒಂದು “ಫಾರ್ಮಾಜೆಟ್’ ಅಪ್ಲಿಕೇಟರ್ ಮೂಲಕ 10 ಸಾವಿರ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ. ಇದನ್ನೂ ಝೈಡಸ್ ಪೂರೈಸಲಿದ್ದು, ಲಸಿಕೆಯ ದರ ಕೊಂಚ ಹೆಚ್ಚಿರಲಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆ