Select Your Language

Notifications

webdunia
webdunia
webdunia
webdunia

ವಿದೇಶಗಳಿಗೆ ಮತ್ತೆ ಕೊರೋನಾ ಲಸಿಕೆ ರಫ್ತು ಮಾಡಲು ಕೇಂದ್ರ ನಿರ್ಧಾರ

ವಿದೇಶಗಳಿಗೆ ಮತ್ತೆ ಕೊರೋನಾ ಲಸಿಕೆ ರಫ್ತು ಮಾಡಲು ಕೇಂದ್ರ ನಿರ್ಧಾರ
ನವದೆಹಲಿ , ಮಂಗಳವಾರ, 21 ಸೆಪ್ಟಂಬರ್ 2021 (09:50 IST)
ನವದೆಹಲಿ : ದೇಶದಲ್ಲಿ ಕೊರೋನಾ ಹೆಚ್ಚಾದುದರಿಂದ ತಡೆ ಹಿಡಿಯಲಾಗಿದ್ದ. ಲಸಿಕೆ ರಫ್ತು ಕಾರ್ಯ ಇದೀಗ ಮತ್ತೆ ಮುಂದುವರೆಯಲಿದೆ. ಮುಂದಿನ ತಿಂಗಳಿನಿಂದ ವಿದೇಶಗಳಿಗೆ ಕೊರೊನಾ ನಿರೋಧಕ ಲಸಿಕೆಯ ರಫ್ತನ್ನು ಮತ್ತೆ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
Photo Courtesy: Google

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಅವರು, 'ದೇಶದ ಅಗತ್ಯಕ್ಕಿಂತ ಹೆಚ್ಚಿನ ಕೊರೊನಾ ನಿರೋಧಕ ಲಸಿಕೆಗಳು ಲಭ್ಯವಾಗಲಿವೆ. ಹೀಗಾಗಿ ಹೆಚ್ಚುವರಿ ಲಸಿಕೆಯನ್ನು 'ವ್ಯಾಕ್ಸಿನ್ ಮೈತ್ರಿ' ಯೋಜನೆ ಅನ್ವಯ ನೆರೆಯ ದೇಶಗಳಿಗೆ ರಫ್ತು ಮಾಡಲು ತೀರ್ಮಾನಿಸಲಾಗಿದೆ,' ಎಂದು ತಿಳಿಸಿದರು.
ಅಕ್ಟೋಬರ್ನಲ್ಲಿ 30 ಕೋಟಿ ಡೋಸ್ ಕೊರೊನಾ ಲಸಿಕೆ ದೇಶಕ್ಕೆ ಲಭ್ಯವಾಗಲಿದ್ದು, ಮುಂದಿನ ಮೂರು ತಿಂಗಳಲ್ಲಿ 100 ಕೋಟಿ ಡೋಸ್ ಸಿಗಲಿವೆ. ದೇಶದ ಕೊರೊನಾ ಲಸಿಕೆ ಅಗತ್ಯ ಪೂರೈಸಿಕೊಂಡು, ವಿದೇಶಗಳಿಗೆ ಉಳಿದ ಡೋಸ್ ಗಳನ್ನು ರಫ್ತು ಮಾಡಲಾಗುವುದು ಎಂದು ಅವರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ : ಬೊಮ್ಮಾಯಿ