Select Your Language

Notifications

webdunia
webdunia
webdunia
webdunia

ಸರ್ಕಾರಿ ಮಾಹಿತಿಗಳನ್ನು ಕೊಡಬೇಡಿ ಎಂದರಾ ಸಿಎಂ ಎಚ್ ಡಿಕೆ? ಸಿಎಂ ನಡೆಗೆ ಬಿಎಸ್ ವೈ ಅನುಮಾನ

ಸರ್ಕಾರಿ ಮಾಹಿತಿಗಳನ್ನು ಕೊಡಬೇಡಿ ಎಂದರಾ ಸಿಎಂ ಎಚ್ ಡಿಕೆ? ಸಿಎಂ ನಡೆಗೆ ಬಿಎಸ್ ವೈ ಅನುಮಾನ
ಬೆಂಗಳೂರು , ಸೋಮವಾರ, 1 ಅಕ್ಟೋಬರ್ 2018 (08:39 IST)
ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳ ಕಾಟ ತಡೆಗಟ್ಟಲು ಮಾಧ್ಯಮಗಳಿಗೂ ನಿಷೇಧ ಹೇರಿ ವಿವಾದಕ್ಕೊಳಗಾಗಿದ್ದ ಸಿಎಂ ಕುಮಾರಸ್ವಾಮಿ ಯಾರೇ ಬಂದರೂ ಸರ್ಕಾರಿ ಮಾಹಿತಿಗಳನ್ನು ಕೊಡಬೇಡಿ ಎಂದು  ಅಧಿಕಾರಿಗಳಿಗೆ ನೀಡಿದ್ದಾರೆನ್ನಲಾಗಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ.

ಎಚ್ ಡಿಕೆ ಇಂತಹದ್ದೊಂದು ಆದೇಶ ನೀಡಿದ್ದಾರೆಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳ ನಡೆಯನ್ನೇ ಅನುಮಾನಿಸಿದ್ದಾರೆ.

‘ಸರ್ಕಾರ ಯಾಕೆ ತನ್ನ ಕಾರ್ಯಕ್ರಮಗಳ ಕುರಿತು ಜನರಿಂದ ಗೌಪ್ಯವಾಗಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ ಮಾತ್ರ ಈ ರೀತಿ ಒಳಗೊಳಗೇ ಕೆಲಸ ಮಾಡುತ್ತಾರೇನೋ. ಆದರೆ ಸಿಎಂ ಕುಮಾರಸ್ವಾಮಿಯವರ ಈ ನಡೆ ನೋಡಿದರೆ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದು ಖಚಿತ’ ಎಂದು ಬಿಎಸ್ ವೈ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಟ ದುನಿಯಾ ವಿಜಯ್ ಭವಿಷ್ಯ ಇಂದು ನಿರ್ಧಾರ