Publish Date: Sat, 29 Sep 2018 (08:52 IST)
Updated Date: Sat, 29 Sep 2018 (08:54 IST)
ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಗರಣ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಇದೀಗ ನಟ, ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಇಲ್ಲದ ಹಗರಣ ಸೃಷ್ಟಿಸುತ್ತಿದೆ ಎಂದು ರಾಫೆಲ್ ವಿಚಾರದಲ್ಲಿ ಕಿಡಿ ಕಾರುತ್ತಿರುವ ಬಿಜೆಪಿ ತಾನು ಅಮಾಯಕ ಎಂದಾದರೆ ತನಿಖೆ ನಡೆಸಲಿ. ಆಗ ಎಲ್ಲರಿಗೂ ಸತ್ಯ ಗೊತ್ತಾಗುತ್ತದಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
‘ತಾನು ತಪ್ಪು ಮಾಡಿಲ್ಲವೆಂದರೆ ಬಿಜೆಪಿಗೆ ಭಯ ಬೇಕಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಲಿ. ರಾಫೆಲ್ ಡೀಲ್ ಬಗ್ಗೆ ಹಲವು ಅಪಾದನೆಗಳು, ಅನುಮಾನಗಳು ಬರುತ್ತಿವೆ. ಹೀಗಾಗಿ ಇದರ ಬಗ್ಗೆ ತನಿಖೆಯಾಗಲಿ’ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡುವಾಗ ಕೇಂದ್ರದ ಬಿಜೆಪಿ ನಾಯಕರು ಫ್ರಾನ್ಸ್ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಆರೋಪಿಸುತ್ತಲೇ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.