Select Your Language

Notifications

webdunia
webdunia
webdunia
webdunia

ಎಲ್ಲರಿಗೂ ಬೂಸ್ಟರ್ ಡೋಸ್..?

ಎಲ್ಲರಿಗೂ ಬೂಸ್ಟರ್ ಡೋಸ್..?
ನವದೆಹಲಿ , ಮಂಗಳವಾರ, 22 ಮಾರ್ಚ್ 2022 (15:02 IST)
ನವದೆಹಲಿ : ವಿಶ್ವದ ವಿವಿಧ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಎಲ್ಲ ಅರ್ಹ ವಯಸ್ಕರಿಗೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸುಗಳನ್ನು ಒದಗಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
 
ಪ್ರಸ್ತುತ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇಸ್ರೇಲಿನಂತಹ ಕೆಲವು ದೇಶಗಳಿಗೆ ಪ್ರಯಾಣಿಸಲು ಬೂಸ್ಟರ್ ಡೋಸುಗಳನ್ನು ಕಡ್ಡಾಯಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯರು ವಿದೇಶಗಳಿಗೆ ಪ್ರಯಾಣಿಸಲು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲ ಅರ್ಹ ವಯಸ್ಕರಿಗೂ ಉಚಿತವಾಗಿ ಬೂಸ್ಟರ್ ಡೋಸನ್ನು ಒದಗಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ. ಆದರೆ ಇದರ ಬಗ್ಗೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗಿಲ್ಲ. ಶೀಘ್ರದಲ್ಲೇ ಸಂಸತ್ತಿನಲ್ಲಿ ಬೂಸ್ಟರ್ ಡೋಸುಗಳ ಕುರಿತು ನಿರ್ಣಯವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ, ಯುರೋಪ ಹಾಗೂ ಏಷ್ಯಾದ ಹಲವಾರು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಭಾರತದಲ್ಲಿ ಸಾರ್ವಕಾಲಿಕ ಕನಿಷ್ಟಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ 181.39 ಜನರಿಗೆ ಕೋವಿಡ್ ಲಸಿಕೆಯ 2 ಡೋಸುಗಳನ್ನು ಒದಗಿಸಲಾಗಿದೆ. ಹಾಗೂ ಸುಮಾರು 2 ಕೋಟಿ ಬೂಸ್ಟರ್ ಡೋಸುಗಳನ್ನು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಬಲಿ ಅಧಿಕಾರಿಗಳ ನಿರ್ಲಕ್ಷಕೆ ಶಾಸಕ ಬೈರತಿ ಸುರೇಶ್ ಗರಂ