Publish Date: Sat, 06 Oct 2018 (09:09 IST)
Updated Date: Sat, 06 Oct 2018 (09:11 IST)
ಬೆಂಗಳೂರು: ಕೊಡಗು ಪ್ರವಾಹ ಪರಿಹಾರ, ಮೇಕೆದಾಟು ಯೋಜನೆಗೆ ಬೆಂಬಲ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರದ ಸಹಕಾರ ಕೋರಲು ರಾಜ್ಯ ಸರ್ಕಾರದ ನಿಯೋಗ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿದ್ದು ನಿಮಗೆ ಗೊತ್ತೇ ಇದೆ.
ಆದರೆ ಈ ನಿಯೋಗದಲ್ಲಿ ದೇವೇಗೌಡರ ಕುಟುಂಬವೇ ಇದ್ದಿದ್ದನ್ನು ನೋಡಿ ರಾಜ್ಯ ಬಿಜೆಪಿ ಟ್ವಿಟರ್ ಮೂಲಕ ವ್ಯಂಗ್ಯ ಮಾಡಿದೆ. ಇದು ದೇವೇಗೌಡರ ಕುಟಂಬದ ನಿಯೋಗ ಎಂದು ಲೇವಡಿ ಮಾಡಿದೆ. ರಾಜ್ಯ ನಿಯೋಗದಲ್ಲಿ ದೇವೇಗೌಡರ ಜತೆಗೆ ಸಿಎಂ ಕುಮಾರಸ್ವಾಮಿ, ಸಹೋದರ ಎಚ್ ಡಿ ರೇವಣ್ಣ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ ಫೋಟೋ ಪ್ರಕಟಿಸಿ ಬಿಜೆಪಿ ವ್ಯಂಗ್ಯ ಮಾಡಿದೆ.
‘ಕರ್ನಾಟಕ ಸರ್ಕಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದೆ. ಈಗ ನಿಮಗೆ ಗೊತ್ತಾಗಿರಬಹುದು ಯಾರು ಸರ್ಕಾರ ನಡೆಸುತ್ತಿರುವವರು ಎಂದು. ಮಿತ್ರ ಪಕ್ಷದ ಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದು ನೀವೇ ನೋಡಿ’ ಎಂದು ಕಾಂಗ್ರೆಸ್ ಸದಸ್ಯರಿಲ್ಲದೇ ಇರುವುದನ್ನು ಪ್ರಸ್ತಾಪಿಸಿ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.