Select Your Language

Notifications

webdunia
webdunia
webdunia
webdunia

ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗುವೆ ಎಂದ ಸಚಿವರು ಯಾರು ಗೊತ್ತಾ?

ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗುವೆ ಎಂದ ಸಚಿವರು ಯಾರು ಗೊತ್ತಾ?
ಮೈಸೂರು , ಶುಕ್ರವಾರ, 5 ಅಕ್ಟೋಬರ್ 2018 (15:11 IST)
ಮೈಸೂರು : ಕೆಜೆಪಿ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಂತಾ ಹೇಳುತ್ತಾ ಬಂದಿದ್ದ ಅರಣ್ಯ ಸಚಿವ ಆರ್.ಶಂಕರ್ ಈಗ ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಆದರೆ ಸಚಿವ ಸಂಪುಟದಲ್ಲಿಯೇ ಇರುತ್ತೇನೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ವಿಚಾರ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಹೇಳಿದ್ದಾರೆ.


ಹಾಗೇ ಸಚಿವ ಅರ್. ಶಂಕರ್ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ  ಎಂಬ ಸುದ್ದಿ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆಲವು ಗೊಂದಲಗಳು ಮಾಧ್ಯಮಗಳಲ್ಲಷ್ಟೇ ಸೃಷ್ಟಿಯಾಗಿದೆ. ಈ ರೀತಿ ಗೊಂದಲ ಆಗಬಾರದೆಂದೇ ನಾನೂ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಶಾಸಕ ವಿಶ್ವನಾಥ್ ಮಾಮನಿ ನಿಧನ