Publish Date: Fri, 05 Oct 2018 (07:03 IST)
Updated Date: Fri, 05 Oct 2018 (07:05 IST)
ಬೆಂಗಳೂರು : ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ತೀವ್ರ ಹೃದಯಾಘಾತದಿಂದ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರಿಗೆ 44 ವರ್ಷ ವಯಸ್ಸಾಗಿದ್ದು, ತಡರಾತ್ರಿ 12.45ರ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರಮೀಳಾ ಉಮಾಶಂಕರ್ ಸೆಪ್ಟೆಂಬರ್ 28ರಂದು ಮೈತ್ರಿ ಸರ್ಕಾರದಲ್ಲಿ ಉಪಮೇಯರ್ ಆಗಿದ್ದರು. ಕಾವೇರಿಪುರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ಅವರು ಜೆಡಿಎಸ್ ಪಕ್ಷದಿಂದ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ರಮೀಳಾ ಉಮಾಶಂಕರ್ ಅವರನ್ನು ಕಳೆದುಕೊಂಡ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.