Publish Date: Fri, 05 Oct 2018 (09:41 IST)
Updated Date: Fri, 05 Oct 2018 (09:44 IST)
ಬೆಂಗಳೂರು: ಉಪಮೇಯರ್ ರಮೀಳಾ ಉಮಾಶಂಕರ್ ನಿಧನಕ್ಕೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ರಮೀಳಾ ಅಕಾಲಿಕ ನಿಧನದ ಬಗ್ಗೆ ಕಂಬನಿ ಮಿಡಿದಿರುವ ಸಿಎಂ ಕುಮಾರಸ್ವಾಮಿ, ನಿನ್ನೆಯಷ್ಟೇ ನಮ್ಮ ಮೆಟ್ರೋ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ನಿನ್ನೆಯಷ್ಟೇ ನಮ್ಮ ಜತೆ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಈವತ್ತು ಅವರು ಇಹಲೋಕ ತ್ಯಜಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತಿದೆ. ಅವರು ಉತ್ತಮ ಕೆಲಸಗಾತಿ, ಪಕ್ಷ ನಿಷ್ಠಾವಂತೆಯಾಗಿದ್ದರು ಎಂದು ಕುಮಾರಸ್ವಾಮಿ ಹೊಗಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದು, ರಮೀಳಾ ನಿಧನ ಆಘಾತ ತಂದಿದೆ. ಅವರ ಕುಟುಂಬದ ಜತೆಗೆ ನಾವಿದ್ದೇವೆ ಎಂದಿದ್ದಾರೆ. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಕೂಡಾ ರಮೀಳಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಸಾವು ಅತೀವ ನೋವು ತಂದಿದೆ. ಇಷ್ಟು ಬೇಗ ಭಗವಂತ ಅವರನ್ನು ಕರೆಸಿಕೊಳ್ಳಬಾರದಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.