Publish Date: Fri, 05 Oct 2018 (08:53 IST)
Updated Date: Fri, 05 Oct 2018 (08:54 IST)
ಬೆಂಗಳೂರು: ಸದ್ಯದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಸಿಎಂ ಕುಮಾರಸ್ವಾಮಿ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಳ್ಳಲಿರುವವರ ಜತೆಗೆ ಇಬ್ಬರು ಸಚಿವರಿಗೆ ಕೊಕ್ ಸಿಗಲಿದೆ ಎನ್ನಲಾಗಿದೆ.
ಹಾಗಿದ್ದರೆ ಸಿಎಂ ತಮ್ಮ ಸಂಪುಟದಿಂದ ಕೈಬಿಡಲಿರುವ ಆ ಸಚಿವರು ಯಾರಿರಬಹುದು? ಕೆಲವೊಂದು ಮೂಲಗಳ ಪ್ರಕಾರ ಕೆಪಿಜೆಪಿ ಪಕ್ಷದ ಸಚಿವ ಶಂಕರ್, ಕಾಂಗ್ರೆಸ್ ನ ಸಿ ಪುಟ್ಟರಂಗಶೆಟ್ಟಿಗೆ ಕೊಕ್ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಸಚಿವೆ ಜಯಮಾಲಾರನ್ನೂ ಕೈಬಿಡಲು ಒತ್ತಾಯ ಕೇಳಿಬರುತ್ತಿದೆ. ಮೇಲ್ಮನೆ ಸದಸ್ಯೆಯಾಗಿರುವ ಜಯಮಾಲಾ ವಿರುದ್ಧ ಸ್ವಪಕ್ಷೀಯರೇ ದೂರು ನೀಡುತ್ತಿರುವ ಹಿನ್ನಲೆಯಲ್ಲಿ ಅವರನ್ನೂ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.