Select Your Language

Notifications

webdunia
webdunia
webdunia
webdunia

ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ!

ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ!
ನವದೆಹಲಿ , ಮಂಗಳವಾರ, 4 ಏಪ್ರಿಲ್ 2023 (12:26 IST)
ಹೊರಗೆ ಹೋಗುವಾಗ ಸನ್ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ದೇಹಕ್ಕೆ ತಂಪು ನೀಡುವ ಹತ್ತಿ ಹಾಗೂ ಸಡಿಲ ಬಟ್ಟೆ ಧರಿಸಿ. ನೀರು, ನೈಸರ್ಗಿಕ ಪಾನೀಯ ಸೇರಿ ಹೆಚ್ಚು ದ್ರವಾಹಾರ ಸೇವಿಸಿ.
 
ವಾಂತಿ-ಭೇದಿಯಾದರೆ ಜ್ಯೂಸ್, ಎಳನೀರು, ಓಆರ್ಎಸ್ ಸೇವಿಸಿ. ಮಧುಮೇಹಿಗಳು ಮಜ್ಜಿಗೆ, ನೀರು, ಗಂಜಿ ಸೇವಿಸುವುದು ಉತ್ತಮ. ಮಕ್ಕಳು, ಗರ್ಭಿಣಿಯರು, ವೃದ್ಧರು ಅನಗತ್ಯ ಹೊರ ಹೋಗಬೇಡಿ. ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ.. ಮನೆ, ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ.

ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು, ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಸಂಜೆ 5 ಗಂಟೆವರೆಗೆ ಬಿಸಿಲಿನ ಪ್ರಖರತೆ ಕಂಡು ಬರುತ್ತಿದೆ. ಒಟ್ಟಾರೆ ಬಿಸಿಲು ಹೆಚ್ಚಾಗುತ್ತಿದೆ. ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಿದ್ರೆ ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ದುರಂತ : ಗಣಿ ಕುಸಿದು 15 ಕಾರ್ಮಿಕರು ಸಾವು!