Publish Date: Wed, 05 Apr 2023 (08:08 IST)
Updated Date: Wed, 05 Apr 2023 (09:37 IST)
ಕೇಪ್ಟೌನ್ : ಪೂರ್ವ ಆಫ್ರಿಕಾದ ಬುರುಂಡಿಯಲ್ಲಿ ಚಿನ್ನದ ಗಣಿ ಕುಸಿದು ಹದಿನೈದು ಕಾರ್ಮಿಕರು ಬಲಿಯಾಗಿದ್ದಾರೆ. ಸಿಬಿಟೋಕ್ ಪ್ರಾಂತ್ಯದ ಮಾಬಾಯಿ ಕಮ್ಯೂನ್ನಲ್ಲಿ ಈ ದುರಂತ ನಡೆದಿದೆ.
ಭಾರೀ ಮಳೆಯಿಂದಾಗಿ ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿತ್ತು. ಕೆಲಸ ಮಾಡುತ್ತಿದ್ದಾಗ ಗಣಿ ಕುಸಿದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಮಳೆ ಕಾರಣಕ್ಕೆ ರುಗೊಗೊ ನದಿ ಉಕ್ಕಿ ಹರಿದು ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿತ್ತು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಹೊಂಡಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹೊರ ಕರೆತರುವಲ್ಲಿ ರಕ್ಷಣಾ ತಂಡಕ್ಕೆ ಸಾಧ್ಯವಾಗಿಲ್ಲ. ನಂತರ ಕಾರ್ಮಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.