ಬೆಂಗಳೂರು : ಪ್ರಧಾನಿ ಮೋದಿಗಾಗಿ ರೆಡಿ ಮಾಡಿದ್ದ ರಸ್ತೆ ಕಿತ್ತೋಗಿ ಪ್ರಧಾನಿ ವರದಿ ಕೇಳಿದಾಗ ಬಿಬಿಎಂಪಿ ಕಳಪೆ ರಸ್ತೆಯ ಬಗ್ಗೆ ಒಪ್ಪಿಕೊಳ್ಳದೇ ಪೈಪ್ ಲೈನ್ ಸೋರಿಕೆ ಅಂತಾ ಜಲಮಂಡಳಿ ಮೇಲೆ ಗೂಬೆ ಕೂರಿಸಿ ವರದಿ ಕೊಟ್ಟಿದ್ದಾಯ್ತ.
ಬಿಬಿಎಂಪಿಯು ರಸ್ತೆ ರಿಪೋರ್ಟ್ ವಿಚಾರದಲ್ಲಿ ಎಷ್ಟೆಲ್ಲ ಕಳ್ಳಾಟವಾಡಿತ್ತು ಅನ್ನೋದು ಬಹಿರಂಗವಾಗಿ ಗೊತ್ತಾಗಿದೆ. ಪ್ರಧಾನಿ ಕಚೇರಿಗೆ ಸುಳ್ಳು ರಿಪೋರ್ಟ್ ಅಂತಾ ಪಬ್ಲಿಕ್ ಟಿವಿಯಲ್ಲೂ ಸುದ್ದಿ ಪ್ರಸಾರವಾಗಿತ್ತು.
ಈಗ ಸೈಲೆಂಟ್ ಆಗಿ ಜ್ಞಾನಭಾರತಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಬಳಿ ರಸ್ತೆ ಕುಸಿತವಾದ ಭಾಗದಲ್ಲಿ ರಸ್ತೆಯ ಗುಣಮಟ್ಟದ ಸ್ಯಾಂಪಲ್ನ್ನು ಲ್ಯಾಬ್ಗೆ ರವಾನಿಸಿದೆ.