Select Your Language

Notifications

webdunia
webdunia
webdunia
webdunia

ಸ್ಪೀಕರ್‌ಗೆ ಟಾಂಗ್ ಕೊಟ್ಟ ಬಸವರಾಜ ಹೊರಟ್ಟಿ

ಸ್ಪೀಕರ್‌ಗೆ ಟಾಂಗ್ ಕೊಟ್ಟ ಬಸವರಾಜ ಹೊರಟ್ಟಿ
ಹಾವೇರಿ , ಬುಧವಾರ, 4 ಏಪ್ರಿಲ್ 2018 (18:28 IST)
ಸ್ಪೀಕರ್ ಕೆ. ಬಿ. ಕೋಳಿವಾಡ ಮತ್ತೊಂದು ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ರಾಜ್ಯ ವಿಧಾನ ಸಭಾ ಸಭಾಧ್ಯಕ್ಷರು ಆಗಿರುವ ಕೆ.ಬಿ.ಕೋಳಿವಾಡ ಅವರು ತಮ್ಮ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದ್ದಕ್ಕೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಪಾದ ಸಾಹುಕಾರ್ ಜೆಡಿಎಸ್ ಪಕ್ಷದ ರಾಣೇಬೆನ್ನೂರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. 
ಜೆಡಿಎಸ್ಅ ಭ್ಯರ್ಥಿ ಯನ್ನು ಕಣದಿಂದ ಹಿಂದೆ ತಗೆದುಕೊಳ್ಳಿ ಎಂದು  ಬಸವರಾಜ ಹೊರಟ್ಟಿ ಯವರಿಗೆ ಒತ್ತಡವನ್ನು ಕೋಳಿವಾಡ ಹೇರಿದ್ದರು ಎನ್ನಲಾಗಿದೆ. ಆದರೆ ಕೋಳಿವಾಡ ಅವರ ಮಾತನ್ನು ಬಸವರಾಜ ಹೊರಟ್ಟಿ  ಕೇಳದ ಹಿನ್ನೆಲೆಯಲ್ಲಿ  ಕಳೆದ 38 ವರುಷಗಳಿಂದ ಜನಪ್ರತಿನಿಧಿಯಾಗಿರುವ  ಹೊರಟ್ಟಿಯವರಿಗೆ ಶಾಸಕರ ಭವನದಲ್ಲಿರುವ ರೂಮ್ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. 
 
ಅವರು ಶಾಸಕರ ಭವನದ 435-436 ರೂಮ್ ನಲ್ಲಿದ್ದಾರೆ. ಆದರೆ ಏಕಾಏಕಿಯಾಗಿ ರೂಮ್ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಕ್ಕೆ ಬಸವರಾಜ ಹೊರಟ್ಟಿ ಅವರು ಉತ್ತರಿಸಿದ್ದರು,  ಕೆ. ಬಿ. ಕೋಳಿವಾಡ ವಿರುದ್ಧ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ರೂಮ್ ಖಾಲಿ ಮಾಡುವುದಿಲ್ಲ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಕೆ. ಬಿ. ಕೋಳಿವಾಡ ಕೀಳು ಮಟ್ಟದ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಗಾಗಿ ರೂಮ್ ಖಾಲಿ ಮಾಡಿಸುತ್ತಿರುವುದಕ್ಕೇ ಕೋಳಿವಾಡ ವಿರುದ್ಧ ಗರಂ ಆಗಿರುವ ಹೊರಟ್ಟಿ ಅವರು, ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಎಲ್ಲರನ್ನೂ ನೋಡಿದ್ದೇನೆಂದು ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಪ್ರಚಾರಕ್ಕೆ ಸ್ಟಾರ್ ನಟರ ಚಿತ್ರ ಬಳಕೆ!