Select Your Language

Notifications

webdunia
webdunia
webdunia
webdunia

ಮೋದಿಗೆ ಆರ್ ಎಸ್ ಎಸ್ ಸುಳ್ಳು ಹೇಳುವುದನ್ನೇ ಹೇಳಿಕೊಟ್ಟಿದೆ: ರಾಹುಲ್ ಗಾಂಧಿ

ಮೋದಿಗೆ ಆರ್ ಎಸ್ ಎಸ್ ಸುಳ್ಳು ಹೇಳುವುದನ್ನೇ ಹೇಳಿಕೊಟ್ಟಿದೆ: ರಾಹುಲ್ ಗಾಂಧಿ
ಶಿವಮೊಗ್ಗ , ಬುಧವಾರ, 4 ಏಪ್ರಿಲ್ 2018 (09:06 IST)
ಶಿವಮೊಗ್ಗ: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ಎಸ್ ಮೋದಿಗೆ ಸುಳ್ಳು ಹೇಳುವುದನ್ನು ಮತ್ತು ಧ್ವೇಷಿಸುವುದನ್ನು ಕಲಿಸಿಕೊಟ್ಟಿದೆ ಎಂದಿದ್ದಾರೆ.

ಧ್ವೇಷಿಸುವವರನ್ನು ಜನ ಸಾಕಷ್ಟು ಬಾರಿ ನಾಶ ಮಾಡಿದ್ದಾರೆ. ಏಕತೆ ಕಾಪಾಡಿಕೊಂಡು ಹೋಗುವವರಿಗೆ ಮಾತ್ರ ದೇಶ ಕಾಪಾಡಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹರಾವ್, ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ದೇಶವನ್ನು ನೋಡಿದ್ದೇವೆ. ಮೋದಿ ಧ್ವೇಷದ ರಾಜಕಾರಣ ಬಿಟ್ಟು, ಪ್ರೀತಿ, ಕರುಣೆಯ ಆಡಳಿತ ನಡೆಸಬೇಕು’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಮೋದಿ ಈಡೇರಿಸಿದ್ದಕ್ಕಿಂತ ನಿರಾಸೆ ಮಾಡಿದ್ದೇ ಹೆಚ್ಚು. ಬಡತನ ನಿರ್ಮೂಲನೆಯಾಗಿಲ್ಲ. ಪ್ರತಿಯೊಬ್ಬರ ಖಾತೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಒಂದು ರೂಪಾಯಿ ಆದರೂ ಬಂದಿದೆಯೇ?’ ಎಂದು ರಾಹುಲ್ ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಹೇಳಿಕೆಯಿಂದ ಬಿಜೆಪಿಗೆ ಇನ್ನೊಂದು ತಲೆನೋವು