Select Your Language

Notifications

webdunia
webdunia
webdunia
webdunia

ಭಾರತ ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!

ಭಾರತ  ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!
ಸೋಫಿಯಾ , ಗುರುವಾರ, 18 ಆಗಸ್ಟ್ 2022 (07:31 IST)
ಸೋಫಿಯಾ : ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ ಅವರು ಭಾರತದ ಕುರಿತು ಹೇಳಿರುವ ಭವಿಷ್ಯ ಹೇಳಿದ್ದಾರೆ.

ಈ ವರ್ಷ ಪ್ರಪಂಚದಲ್ಲಿ ಹವಾಮಾನ ಬದಲಾವಣೆಯಿಂದ ತಾಪಮಾನ ಭಾರೀ ಏರಿಕೆಯಾಗಲಿದೆ. ಇದರಿಂದಾಗಿ ಮಿಡತೆಗಳ ಕಾಟ ಏಕಾಏಕಿ ಹೆಚ್ಚಾಗುತ್ತದೆ. ಹಸಿರು ಮತ್ತು ಆಹಾರಕ್ಕಾಗಿ ಮಿಡತೆಗಳ ಹಿಂಡು ಭಾರತದ ಮೇಲೆ ದಾಳಿ ಮಾಡುತ್ತವೆ.

ಇವುಗಳ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಲ್ಲದೆ ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಸದ್ಯ ಬಾಬಾ ವಂಗಾ ಅವರ ಈ ಭವಿಷ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಇವರ ಭವಿಷ್ಯವಾಣಿಗಳು ಎಷ್ಟು ನಿಜ ಎಂಬುವುದು ಕಾಲವೇ ಉತ್ತರಿಸಬೇಕಿದೆ. ಆದರೆ ಅವರು ಈ ಹಿಂದೆ ಹೇಳಿರುವುದರಲ್ಲಿ ಹಲವು ವಿಚಾರಗಳು ನಿಜವಾಗಿದೆ. 

ಬಾಬಾ ವಂಗಾ ಅವರು ತಮ್ಮ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರಿಗೆ ದೇವರು ಭವಿಷ್ಯ ಗ್ರಹಿಸುವ ಶಕ್ತಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಪ್ರಪಂಚದ ಬಗ್ಗೆ ಅನೇಕ ಭವಿಷ್ಯಗಳನ್ನು ನುಡಿದಿದ್ದು, ಅವುಗಳಲ್ಲಿ ಹಲವು ನಿಜವೆಂದು ಸಾಬೀತಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ತಿರುಗೇಟು