Publish Date: Tue, 27 Mar 2018 (16:23 IST)
Updated Date: Tue, 27 Mar 2018 (18:58 IST)
ಕಳೆದ ಬಾರಿ ರಾಜ್ಯ ಪ್ರವಾಸ ಮಾಡಿದ್ದಾಗ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದು ಕೊನೆಗೆ ತನ್ನ ತಪ್ಪಿಗೆ ತಾನೇ ಕ್ಷಮೆ ಕೋರಿದ್ದ ಅಮಿತ್ ಶಾ ಇದೀಗ ಮತ್ತೊಮ್ಮೆ ತಪ್ಪು ಮಾತನಾಡಿ ನಗೆಪಾಟಲಿಗೀಡಾಗಿದ್ದಾರೆ.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ರಾಜ್ಯದ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಯಡಿಯೂರಪ್ಪನವರನ್ನೇ ಟೀಕಿಸಿ ಲೇವಡಿಗೊಳಗಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರದ್ದು ಭ್ರಷ್ಟ ಸರ್ಕಾರ ಎನ್ನುವ ಬದಲು ಯಡಿಯೂರಪ್ಪನವರದ್ದು ನಂ.1 ಭ್ರಷ್ಟ ಸರ್ಕಾರ ಎಂದು ತಾವೇ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅಂತೂ ತಪ್ಪು ಮಾತನಾಡುವಲ್ಲಿಯೂ ಕಾಂಗ್ರೆಸ್-ಬಿಜೆಪಿ ಅಧ್ಯಕ್ಷರು ಪೈಪೋಟಿ ಮಾಡಿದಂತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ