Select Your Language

Notifications

webdunia
webdunia
webdunia
webdunia

ಮತ್ತೆ ದೆಹಲಿಯಲ್ಲಿ ವಾಯು ಮಾಲಿನ್ಯ ಏರಿಕೆ!

ಮತ್ತೆ ದೆಹಲಿಯಲ್ಲಿ ವಾಯು ಮಾಲಿನ್ಯ ಏರಿಕೆ!
ನವದೆಹಲಿ , ಶುಕ್ರವಾರ, 28 ಅಕ್ಟೋಬರ್ 2022 (13:47 IST)
ನವದೆಹಲಿ : ದೀಪಾವಳಿಯ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣದ ಏರಿಕೆ ಕಾಣುತ್ತಿದ್ದು, ಯಾವುದೇ ಸುಧಾರಣೆಗಳು ಕಂಡು ಬರುತ್ತಿಲ್ಲ.
 
ಇಂದು ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’ ವಿಭಾಗದಲ್ಲಿ ಉಳಿದುಕೊಂಡಿದ್ದು, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 329 ರಷ್ಟಿದೆ.

ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು ತೋರಿಸುವ ಸರ್ಕಾರಿ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಮೇಲ್ವಿಚಾರಣಾ ಕೇಂದ್ರಗಳ ಮಾಹಿತಿಯ ಪ್ರಕಾರ, ಆನಂದ್ ವಿಹಾರ್ನಲ್ಲಿನ AQI 834 ರಷ್ಟಿದೆ, ಇದು ನಗರದಲ್ಲಿ ಅತ್ಯಧಿಕವಾಗಿದೆ.

ರೋಹಿಣಿಯಂತಹ ಇನ್ನೂ ಕೆಲವು ಪ್ರದೇಶಗಳು AQI 357 ರಷ್ಟಿದೆ, ಜಿಲ್ಮಿಲ್ ಪ್ರದೇಶವು 418ರ AQI ಅನ್ನು ದಾಖಲಿಸಿದೆ ಮತ್ತು ಸೋನಿಯಾ ವಿಹಾರ್ನಲ್ಲಿ AQI 332 ರಷ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ