Select Your Language

Notifications

webdunia
webdunia
webdunia
webdunia

ವಾಟ್ಸಪ್ನಲ್ಲಿ ಹೊಸ ಫೀಚರ್, ಇನ್ಮುಂದೆ ಸ್ಕ್ರೀನ್‌ಶಾಟ್‌ಗೆ ನಿರ್ಬಂಧ!

ವಾಟ್ಸಪ್ನಲ್ಲಿ ಹೊಸ ಫೀಚರ್, ಇನ್ಮುಂದೆ ಸ್ಕ್ರೀನ್‌ಶಾಟ್‌ಗೆ ನಿರ್ಬಂಧ!
ನವದೆಹಲಿ , ಬುಧವಾರ, 10 ಆಗಸ್ಟ್ 2022 (07:32 IST)
ವಾಷಿಂಗ್ಟನ್ : ವಾಟ್ಸಪ್ ತನ್ನ ಬಳಕೆದಾರರಿಗೆ ಹೆಚ್ಚು ಹೆಚ್ಚು ಗೌಪ್ಯತೆಯನ್ನು ಕಾಪಾಡಲು ಹೊಸ ಹೊಸ ಫೀಚರ್ಗಳನ್ನು ತರುತ್ತಲೇ ಇದೆ.

ಇದೀಗ ವಾಟ್ಸಪ್ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವಂತಹ ಅತಿ ಉಪಯುಕ್ತ 3 ಫೀಚರ್ಗಳನ್ನು ತರಲು ಸಿದ್ಧವಾಗಿದೆ.

 
ಮೆಸೆಜಿಂಗ್ ದೈತ್ಯ ಇದೀಗ ಬಳಕೆದಾರರಿಗೆ ವಾಟ್ಸಪ್ ಗ್ರೂಪ್ಗಳಿಂದ ಮೌನವಾಗಿ ತೊರೆಯಲು ಸಹಾಯ ಮಾಡುತ್ತಿದೆ. ಯಾವುದಾದರೂ ಗ್ರೂಪ್ ನಿಮಗೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದ್ದರೆ, ಆ ಗ್ರೂಪ್ನ ಸದಸ್ಯರಾರಿಗೂ ತಿಳಿಯದಂತೆ ನಿರ್ಗಮಿಸಲು ಸಾಧ್ಯವಿದೆ.

ನೀವು ಗ್ರೂಪ್ ತೊರೆಯುವ ಬಗ್ಗೆ ಆ ಗ್ರೂಪ್ನ ಅಡ್ಮಿನ್ಗೆ ಮಾತ್ರ ತಿಳಿಯುವಂತಹ ಹೊಸ ಫೀಚರ್ ಅನ್ನು ವಾಟ್ಸಪ್ ತರುತ್ತಿದೆ.
ವಾಟ್ಸಪ್ ಬಳಕೆದಾರರಿಗೆ ತಮ್ಮ ಪ್ರೊಫೈಲ್ ಚಿತ್ರ ಹಾಗೂ ಕೊನೆಯದಾಗಿ ಆನ್ಲೈನ್ ಇದ್ದ ಸಮಯವನ್ನು ಮರೆ ಮಾಡುವಂತಹ ಅವಕಾಶ ಈ ಮೊದಲೇ ನೀಡಿತ್ತು. ಆದರೆ ನೀವು ಆನ್ಲೈನ್ ಇರುವುದನ್ನು ಮರೆ ಮಾಡಲು ಅವಕಾಶ ನೀಡಿರಲಿಲ್ಲ.

ಇದೀಗ ವಾಟ್ಸಪ್ ಪ್ರತಿ ಚ್ಯಾಟ್ನ ಮೇಲ್ಗಡೆ ತೋರಿಸುವ ಆನ್ಲೈನ್ ಅಥವಾ ಆಫ್ಲೈನ್ ಸ್ಥಿತಿಯನ್ನು ಮರೆ ಮಾಡಲು ಅವಕಾಶ ನೀಡಲಿದೆ. ನೀವು ಆನ್ಲೈನ್ ಇರುವುದರಿಂದ ನಿಮ್ಮ ಸ್ನೇಹಿತರು ಕಿರಿಕಿರಿ ಮಾಡುತ್ತಿದ್ದರೆ, ಅವರಿಗೆ ತಿಳಿಯದಂತೆ ಈ ಫೀಚರ್ ಅನ್ನು ಬಳಸಿ ಕಿರಿಕಿರಿ ತಪ್ಪಿಸಬಹುದಾಗಿದೆ. 

ಗೌಪ್ಯತೆಗೆ ಬಹಳ ಮುಖ್ಯವಾದ ಫೀಚರ್ ಅನ್ನು ವಾಟ್ಸಪ್ ಕೊನೆಗೂ ತರಲಿದೆ. ವಾಟ್ಸಪ್ ವೀವ್ ವನ್ಸ್(ಒಂದು ಬಾರಿ ಮಾತ್ರ ತೋರಿಸು) ಫೀಚರ್ ಅನ್ನು ಬಳಸುವ ಸಮಯ ಸ್ಕ್ರೀನ್ಶಾಟ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಿತೀಶ್ ಹೊಸ ಸರ್ಕಾರ ಸ್ಥಾಪನೆ