Select Your Language

Notifications

webdunia
webdunia
webdunia
webdunia

ಎರಡು ಡೋಸ್ ಲಸಿಕೆ ಪಡೆದರೂ ಡೆಲ್ಟಾ ವೈರಸ್ ಸೋಂಕಿಗೆ 63 ವರ್ಷದ ಮಹಿಳೆ ಬಲಿ

ಎರಡು ಡೋಸ್ ಲಸಿಕೆ ಪಡೆದರೂ ಡೆಲ್ಟಾ ವೈರಸ್ ಸೋಂಕಿಗೆ 63 ವರ್ಷದ ಮಹಿಳೆ ಬಲಿ
ಮುಂಬೈ , ಶುಕ್ರವಾರ, 13 ಆಗಸ್ಟ್ 2021 (11:26 IST)
ಮುಂಬೈ, ಆ. 13: ಕೊರೋನಾ ವೈರಸ್ನ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ನ ಆರ್ಭಟ ದೇಶಾದ್ಯಂತ ಹೆಚ್ಚಾಗುತ್ತಿದೆ. ಕೇರಳದಲ್ಲಂತೂ ಸಾವಿರಾರು ಪ್ರಕರಣಗಳು ಡೆಲ್ಟಾ ವೈರಸ್ನದ್ದಾಗಿವೆ. ಲಸಿಕೆ ಹಾಕಿಸಿಕೊಂಡರೆ ಕೊರೋನಾವನ್ನ ಹಿಮ್ಮೆಟ್ಟಿಸಬಹುದು ಎಂಬ ನಂಬಿಕೆಗೆ ಕೊಡಲಿಪೆಟ್ಟು ಕೊಡುವ ಬೆಳವಣಿಗೆ ಆಗುತ್ತಿದೆ. ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡ ಜನರಲ್ಲೂ ಡೆಲ್ಟಾ ವೈರಸ್ಗೆ ಪಾಸಿಟಿವ್ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ಗೆ ಎರಡನೇ ಬಲಿಯಾಗಿದೆ

. ಮುಂಬೈನಲ್ಲಿ ಜುಲೈ 27ರಂದು ಮೃತಪಟ್ಟಿದ್ದ 63 ವರ್ಷದ ಮಹಿಳೆಗೆ ಡೆಲ್ಟಾ ವೈರಸ್ ಸೋಂಕು ಇದ್ದದ್ದು ದೃಢಪಟ್ಟಿದೆ. ಆದರೆ, ಈ ಮಹಿಳೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆನ್ನಲಾಗಿದೆ. ಹೀಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡೂ ಡೆಲ್ಟಾ ಪ್ಲಸ್ ಸೋಂಕಿಗೆ ಮುಂಬೈ ವ್ಯಕ್ತಿ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.
ಮಹಾರಾಷ್ಟ್ರದ ರತ್ನಗಿರಿಯಲ್ಲಿ 80 ವರ್ಷದ ವೃದ್ಧೆಯೊಬ್ಬರು ಜೂನ್ 13ರಂದು ಡೆಲ್ಟಾ ರೂಪಾಂತರಿ ವೈರಸ್ಗೆ ತುತ್ತಾಗಿ ಬಲಿಯಾಗಿದ್ದರು. ಆದರೆ ಇವರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಲಿಲ್ಲ. ಮಹಾರಾಷ್ಟ್ರದಲ್ಲಿ 20 ಜನರಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇವರ ಪೈಕಿ ಮುಂಬೈನಲ್ಲೇ 7 ಪ್ರಕರಣಗಳಿವೆ. ಏಳು ಮಕ್ಕಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
ಇದೇ ವೇಳೆ, ದೇಶಾದ್ಯಂತ ನಿನ್ನೆ ಒಂದೇ ದಿನ ದಾಖಲಾದ ಪ್ರಕರಣಗಳ ಸಂಖ್ಯೆ 40,120 ಆಗಿದೆ. ಚೇತರಿಸಿಕೊಂಡವರು 42,295 ಮಂದಿ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 3,85,227 ಇದೆ. ಸಕ್ರಿಯ ಪ್ರಕರಣಗಳಲ್ಲಿ ಅಮೆರಿಕ, ಬ್ರೆಜಿಲ್, ಬ್ರಿಟನ್, ಸ್ಪೇನ್, ಇರಾನ್, ಇಂಡೋನೇಷ್ಯಾ, ಮೆಕ್ಸಿಕೋ, ರಷ್ಯಾ ದೇಶಗಳು ಭಾರತಕ್ಕಿಂತ ಮುಂದಿವೆ. ಟರ್ಕಿಯಲ್ಲೂ ಕೇಸ್ಗಳು ಹೆಚ್ಚುತ್ತಲೇ ಇವೆ.
ಇನ್ನು, ಕರ್ನಾಟಕದಲ್ಲಿ ನಿನ್ನೆ 1,857 ಪಾಸಿಟಿವ್ ಕೇಸ್ಗಳು ವರದಿಯಾಗಿವೆ. 1,950 ಮಂದಿ ಚೇತರಿಸಿಕೊಂಡಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 22,754ಕ್ಕೆ ಇಳಿದಿದೆ. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇಲ್ಲಿ 1,77,040 ಆಕ್ಟಿವ್ ಕೇಸ್ಗಳಿವೆ. ಅದು ಬಿಟ್ಟರೆ ಮಹಾರಾಷ್ಟ್ರದಲ್ಲಿ 65,808 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕ ನಂತರದ ಸ್ಥಾನದಲ್ಲಿದ್ದರೆ ತಮಿಳುನಾಡು, ಆಂಧ್ರ ರಾಜ್ಯಗಳು ಐದು ಮತ್ತು ಆರನೇ ಸ್ಥಾನದಲ್ಲಿವೆ. ಇವು ಬಿಟ್ಟರೆ 10 ಸಾವಿರಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವುದು ಮಿಜೋರಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ. ಆದರೆ, 15 ರಾಜ್ಯಗಳಲ್ಲಿ ನಿನ್ನೆ ಸಕ್ರಿಯ ಪ್ರಕರಣಗಳು ಏರಿಕೆಯಾಗಿವೆ.
ಭಾರತದಲ್ಲಿ ಕಳೆದ ಒಂದು ದಿನದಲ್ಲಿ 585 ಜನರು ಕೋವಿಡ್ಗೆ ಬಲಿಯಾಗಿದ್ದಾರೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದೂವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 4,30,254 ಇದೆ. ಕರ್ನಾಟಕದಲ್ಲಿ ನಿನ್ನೆ 30 ಮಂದಿ ಬಲಿಯಾಗುವುದರೊಂದಿಗೆ ಇಲ್ಲಿ ಸಾವಿನ ಸಂಖ್ಯೆ 36,911 ಆಗಿದೆ. ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ ನಿನ್ನೆ 160 ಮಂದಿ ಬಲಿಯಾಗಿದ್ಧಾರೆ. ಮಹಾರಾಷ್ಟ್ರದಲ್ಲಿ 208 ಜನರು ಸಾವನ್ನಪ್ಪಿದ್ಧಾರೆ. ಒಡಿಶಾ ರಾಜ್ಯದಲ್ಲಿ 67 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಇದೇ ವೇಳೆ ಲಸಿಕೆ ಕಾರ್ಯ ವೇಗ ಪಡೆದುಕೊಂಡಿದೆ. ನಿನ್ನೆ ಒಂದೇ ದಿನ ಸುಮಾರು 57 ಲಕ್ಷ ಲಸಿಕೆ ಡೋಸ್ಗಳನ್ನ ಹಾಕಲಾಗಿದೆ. ಇದೂವರೆಗೆ 52.96 ಕೋಟಿಯಷ್ಟು ಡೋಸ್ಗಳನ್ನ ಇದೂವರೆಗೆ ಜನರಿಗೆ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿಯಿಂದ ಬಲವಂತದ ಲೈಂಗಿಕ ಕ್ರಿಯೆ ಅಪರಾಧವಲ್ಲ: ಕೋರ್ಟ್ ತೀರ್ಪು