Select Your Language

Notifications

webdunia
webdunia
webdunia
webdunia

1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ!

1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ!
ನವದೆಹಲಿ , ಶನಿವಾರ, 31 ಜುಲೈ 2021 (17:02 IST)
ನವದೆಹಲಿ(ಜು.31): ಕೊರೋನಾ ಸಂಕಷ್ಟ, ಮಳೆ, ಪ್ರವಾಹ ಸೇರಿದಂತೆ ಹಲವು ವಿಘ್ನಗಳ ನಡುವೆ ಭಾರತದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತ ಸ್ವಾತಂತ್ರ್ಯ ದಿಚಾರಣೆ ಸ್ಮರಣೀಯವಾಗಿಸಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ಪ್ರಮುಖ ಸಾಧನೆಗಳನ್ನು ತಿಳಿಯಲೇಬೇಕು.

•ವಿಘ್ನ, ಆತಂಕದ ನಡುವೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತ
•ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ಪ್ರಮುಖ ಸಂಗತಿ
•1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ ಇಲ್ಲಿವೆ
1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ಪ್ರತಿ ನಿಮಿಷಕ್ಕೆ ಭಾರತ ಹಲವು ಕ್ಷೇತ್ರಕ್ಕೆ ಖರ್ಚು ಮಾಡುವ ವೆಚ್ಚ, ಗಳಿಕೆ, ಖರೀದಿ ಸೇರಿದಂತೆ ಹಲವು ಕುತೂಹಲಕರ ಮಾಹಿತಿ ನೀಡಲಾಗಿದೆ.
•ಭಾರತ ಪ್ರತಿ ನಿಮಿಷವೂ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಮಾಡುವ ವೆಚ್ಚ: 16,06,072 ರೂಪಾಯಿ
•ಭಾರತ ಪ್ರತಿ ನಿಮಿಷ ರಫ್ತು ಮಾಡುವ ಕೃಷಿ ಉತ್ಪನ್ನಗಳ ಮೊತ್ತ: 59,16,501 ರೂಪಾಯಿ
•ಭಾರತ ಪ್ರತಿ ನಿಮಿಷ ಉತ್ಪಾದಿಸುವ ಆಹಾರ ಧಾನ್ಯಗಳ ಪ್ರಮಾಣ: 541 ಟನ್
•ಭಾರತ  ಪ್ರತಿ ನಿಮಿಷ ಉತ್ಪಾದಿಸುವ ಹಾಲಿನ ಪ್ರಮಾಣ: 335 ಟನ್
•ಭಾರತ ಪ್ರತಿ ನಿಮಿಷ ಹೆಲ್ತ್ಕೇರ್ ಕ್ಷೇತ್ರಕ್ಕೆ Pಇ/ ಗಿಅ ವಲಯದಿಂದ ಸಂಗ್ರಹಿಸುವ ನಿಧಿ: 43,437 ರೂಪಾಯಿ
•ಭಾರತ ಪ್ರತಿ ನಿಮಿಷ ಆನ್ಲೈನ್ ಚಿಲ್ಲರೆ ವ್ಯಾಪಾರದಿಂದ ಗಳಿಸುವ ಆದಾಯ: 35,37,777 ರೂಪಾಯಿ
•ಭಾರತ ಪ್ರತಿ ನಿಮಿಷ ಹೈಪರ್-ಲೋಕಲ್ ಕಾಮರ್ಸ್ ಸೆಕ್ಟರ್  ಮೂಲಕ ಸಂಗ್ರಹಿಸುವ ಹಣ: 3,86,102 ರೂಪಾಯಿ
•ಭಾರತದಲ್ಲಿ ಪ್ರತಿ ನಿಮಿಷ ಮಾರಾಟವಾಗುವ ಉಡುಪು: 54,417
•ಭಾರತ ಪ್ರತಿ ನಿಮಿಷ ಉತ್ಪಾದಿಸುವ ವಿದ್ಯುತ್: 2.4 ಮಿಲಿಯನ್ ಯುನಿಟ್
•ಭಾರತದಲ್ಲಿ ವಿದ್ಯುತ್ ಉತ್ಪಾದಿಸಲು ಪ್ರತಿ ನಿಮಿಷ ಬಳಕೆಯಾಗುವ ಕಲ್ಲಿದ್ದಲು: 1,081 ಟನ್
•ಭಾರತದಲ್ಲಿ ಪ್ರತಿ ನಿಮಿಷ ಉತ್ಪಾದಿಸುವ ವಾಹನ ಸಂಖ್ಯೆ: 64 ವಾಹನಗಳು
•ಭಾರತ ಪ್ರತಿ ನಿಮಿಷ ರಫ್ತು ಮಾಡುವ ಎಂಜಿನಿಯರಿಂಗ್ ವಸ್ತುಗಳ ಮೌಲ್ಯ: 1,27,91,380 ರೂಪಾಯಿ
•ಭಾರತ ಪ್ರತಿ ನಿಮಿಷ ರಫ್ತು ಮಾಡುವ ಪೆಟ್ರೋಲಿಯಂ ಮೌಲ್ಯ : 62,13,944 ರೂಪಾಯಿ
•ಭಾರತದಲ್ಲಿ ಪ್ರತಿ ನಿಮಿಷ ಮಾರಾಟವಾಗುವ ಚರ್ಮದ ಉತ್ಪನ್ನ ಮೌಲ್ಯ: 4,22,623
•ಭಾರತದಲ್ಲಿ ಪ್ರತಿ ನಿಮಿಷ ಸರಕು ಸಾಗಾಣೆ: 1,395 ಟನ್
•ಭಾರತ ಪ್ರತಿ ನಿಮಿಷ ಐಟಿ ರಫ್ತುಗಳಿಂದ ಗಳಿಸುವ ಆದಾಯ: 2,09,86,937 ರೂಪಾಯಿ
•ಭಾರತದಲ್ಲಿ ಪ್ರತಿ ನಿಮಿಷ ಜಾಹೀರಾತು ಉದ್ಯಮದಿಂದ ಬರುವ ಆದಾಯ: 17,16,004 ರೂಪಾಯಿ
•ಭಾರತದ ಟಾಪ್ 50 ಸಿನಿಮಾಗಳಿಂದ ಪ್ರತಿ ನಿಮಿಷ ಗಳಿಸುವ ಆದಾಯ: 75,197 ರೂಪಾಯಿ
•ಭಾರತೀಯ ರೈಲ್ವೇ ಪ್ರತಿ ನಿಮಿಷ ಸಾಗಿಸುವ ಸರಕು:  2,300 ಟನ್
•ಭಾರತದಲ್ಲಿ ಪ್ರತಿ ನಿಮಿಷ ಬಳಕೆಯಾಗುವ ಸ್ಟೀಲ್ ಉತ್ಪನ್ನ: 197 ಟನ್
•ಭಾರತದಲ್ಲಿ ಪ್ರತಿ ನಿಮಿಷ ಬಳಕೆಯಾಗುತ್ತಿರುವ ಸಿಮೆಂಟ್: 667 ಟನ್
•ಭಾರತ ಪ್ರತಿ ನಿಮಿಷ ವಿದೇಶಿ ವಿನಿಮಯದಿಂದ ಗಳಿಸುವ ಆದಾಯ: 50,22,834 ರೂಪಾಯಿ
•ಭಾರತ ಪ್ರತಿ ನಿಮಿಷ ತಯಾರಾಗುವ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನ: 54
•ಭಾರತದ ಮಾಧ್ಯಮಗಳು ಪ್ರತಿ ನಿಮಿಷ ಚಂದಾದಾರಿಕೆಯಿಂದ ಪಡೆಯುವ ಆದಾಯ:  16,17,824 ರೂಪಾಯಿ
•ಭಾರತದಲ್ಲಿ ಸಂಚಾರ,ಪ್ರಯಾಣದಿಂದ ಗಳಿಸುವ ಆದಾಯ: 10,20,037 ರೂಪಾಯಿ
ಭಾರತದ ಈ ಸ್ವಾತಂತ್ರ್ಯ ದಿನಾಚರೆ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ವಿಚಾರಗಳಿವು. ಪ್ರತಿ ನಿಮಿಷ ಭಾರತದ ಸಾಮರ್ಥ್ಯ ಎಷ್ಟಿದೆ ಅನ್ನೋ ಸಣ್ಣ ಚಿತ್ರಣ ಇಲ್ಲಿದೆ.
ಇಲ್ಲಿ ನೀಡಿರುವ ದಾಖಲೆಗಳು ಭಾರತ ಸರ್ಕಾರ 2019ರಲ್ಲಿ ನೀಡಿದ ಅಧೀಕೃತ ದಾಖಲೆಗಳಾಗಿವೆ. 2020 ಹಾಗೂ 2021ರಲ್ಲಿ ಕೊರೋನಾ ಕಾರಣ ಭಾರತದ ಆರ್ಥಿಕತೆಗೆ, ಉತ್ಪನ್ನ, ಮಾರಾಟ, ರಫ್ತು ಸೇರಿದಂತೆ ಎಲ್ಲಾ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಆದರೆ ಭಾರತ ಶೀಘ್ರದಲ್ಲೇ ಈ ಸಂಕಷ್ಟದಿಂದ ಕಮ್ಬ್ಯಾಕ್ ಮಾಡಲಿದೆ ಎಂದು ಅಂತಾರಷ್ಟ್ರೀಯ ಎಜೆನ್ಸಿಗಳು, ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ:
ಬ್ರಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದು, ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬಂದು ಆಗಸ್ಟ್ 15, 2021ಕ್ಕೆ 75 ವರ್ಷಗಳು ಸಂದಲಿದೆ. 1947, ಆಗಸ್ಟ್ 15 ರಂದು ಭಾರತ ಸ್ವತಂತ್ರಗೊಂಡಿತು. ತ್ಯಾಗ ಬಲಿದಾನ, ಹೋರಾಟ, ಪ್ರತಿಭಟನೆ, ಜೈಲುವಾಸ ಸೇರಿದಂತೆ ನರಕಯಾತನೆ ಮೂಲಕ ಭಾರತ ಸ್ವಾತಂತ್ರ್ಯ ಪಡೆದುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ಕಚೇರಿಯಲ್ಲಿ ಕೊಲೆಯಾದ ಫೈನಾನ್ಶಿಯರ್!