ಪಲ್ವಾಲ್ : ನಿಗೂಢ ಜ್ವರದಿಂದಾಗಿ ಕಳೆದ ಹರಿಯಾಣದ ಕೆಲ ಗ್ರಾಮಗಳಲ್ಲಿ 10 ದಿನಗಳಲ್ಲಿ 24 ಮಕ್ಕಳು ಸಾವನ್ನಪ್ಪಿದ್ದು, ಜನರನ್ನು,ಪೋಷಕರನ್ನು ಚಿಂತೆಗೀಡು ಮಾಡಿದೆ.
ಹರಿಯಾಣದ ಪಲ್ವಾಲ್ ಜಿಲ್ಲೆಯ ಹಾಥಿನ್ ಪ್ರದೇಶದಲ್ಲಿ 11 ಮಕ್ಕಳು, ಚೈಂಸಾ ಗ್ರಾಮದಲ್ಲಿ 8 ಮತ್ತು ಸೌಂದ್ ಗ್ರಾಮದಲ್ಲಿ ಐವರು ಮಕ್ಕಳು ಮೃತಪಟ್ಟಿದ್ದಾರೆ.
ವೈದ್ಯರು ಕೆಲವು ಮಕ್ಕಳನ್ನು ಪರೀಕ್ಷಿಸಿ ಡೆಂಗ್ಯೂ ಎಂದು ಹೇಳುತ್ತಿದ್ದಾರೆ. ಗ್ರಾಮಸ್ಥರ ಪ್ರಕಾರ ಹಾಥಿನ್ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಮಕ್ಕಳು ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಈ ನಿಗೂಢ ಜ್ವರ ಏನೆಂದು ಇನ್ನೂ ಪತ್ತೆ ಮಾಡದ ಹರಿಯಾಣ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ.