Select Your Language

Notifications

webdunia
webdunia
webdunia
webdunia

ಇಂದಿನಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ

ಇಂದಿನಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ
ಬೆಂಗಳೂರು , ಮಂಗಳವಾರ, 28 ಡಿಸೆಂಬರ್ 2021 (07:09 IST)
ಬೆಂಗಳೂರು : ಹೊಸ ವರ್ಷದ ಹೊತ್ತಲ್ಲಿ ಜನಸಂದಣಿ ನಿರ್ಬಂಧಿಸಿ ಹೆಚ್ಚಾಗುತ್ತಿರುವ ಕೊರೋನಾ, ರೂಪಾಂತರಿ ಓಮಿಕ್ರಾನ್ ಹರಡದಂತೆ ತಡೆಯಲು ಸರ್ಕಾರ ಕಠಿಣ ನಿಯಮ ಪ್ರಕಟಿಸಿದೆ.

ರಾಜ್ಯಾದ್ಯಂತ ನಾಳೆ ರಾತ್ರಿ 10 ಗಂಟೆಯಿಂದ ಜನವರಿ 7ರ ಮುಂಜಾನೆ 5 ಗಂಟೆವರೆಗೆ ಒಟ್ಟು 10 ದಿನ ಕಾಲ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಆದರೆ ಈ ರಾತ್ರಿ ನಿರ್ಬಂಧಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರದ ತೀರ್ಮಾನಕ್ಕೆ ಮುಖ್ಯವಾಗಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಕ್ಲಬ್-ಪಬ್-ಬಾರ್ ಗಳು, ಥಿಯೇಟರ್, ಆಟೋ-ಟ್ಯಾಕ್ಸಿ ವಲಯದಲ್ಲಿ ತೀವ್ರ ಟೀಕೆ-ಟಿಪ್ಪಣಿ ವ್ಯಕ್ತವಾಗಿದೆ.

ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸ್ತೇವೆ. ದಯವಿಟ್ಟು ನೈಟ್ ಕರ್ಫ್ಯೂ ಸಡಿಲಿಸಿ ಅಂತ ಕೆಲವರೂ, ನೈಟ್ ಕರ್ಫ್ಯೂ ಬೇಡವೇ ಬೇಡ ಮತ್ತೆ ಕೆಲವರೂ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನೈಟ್ ಕರ್ಫ್ಯೂಗೆ ಜನರ ಆಕ್ರೋಶ..!