Select Your Language

Notifications

webdunia
webdunia
webdunia
webdunia

ನೈಟ್ ಕರ್ಫ್ಯೂ ಉಲಂಘಿಸಿದರೆ ಕೇಸ್ - ಕಮಲ್ ಪಂಥ್

ನೈಟ್ ಕರ್ಫ್ಯೂ ಉಲಂಘಿಸಿದರೆ ಕೇಸ್ - ಕಮಲ್ ಪಂಥ್
ಬೆಂಗಳೂರು , ಸೋಮವಾರ, 27 ಡಿಸೆಂಬರ್ 2021 (17:25 IST)
ಸರ್ಕಾರದ ಆದೇಶದಂತೆ ನಾಳೆಯಿಂದ ನೈಟ್ ಕಫ್ರ್ಯೂ ಜಾರಿಗೆ ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಕಫ್ರ್ಯೂ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಇಂದಿಲ್ಲಿ ತಿಳಿಸಿದ್ದಾರೆ.ಜನರು ಗುಂಪು ಸೇರಬಾರದು, ಪಬ್, ಬಾರ್, ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು, ತುರ್ತು ಕೆಲಸಕ್ಕೆ ಹೋಗುವವರು, ಅಸ್ಪತ್ರೆಗೆ ಹೋಗುವವರು ದಾಖಲೆ ತೋರಿಸಬೇಕು ಎಂದು ಹೇಳಿದರು.
 
ಇವರನ್ನು ಹೊರತುಪಡಿಸಿ ಬೇರೆ ಯಾರೂ ಅನಗತ್ಯವಾಗಿ ಹೊರಗೆ ಓಡಾಡಬಾರದು. ಸರ್ಕಾರದ ಆದೇಶವನ್ನು ನಾವು ಪಾಲಿಸಬೇಕು, ಕೋವಿಡ್ ನಿಯಮಗಳ ಅನ್ವಯ ಜನರು ಎಲ್ಲಿಯೂ ಒಟ್ಟಾಗಿ ಸೇರಬಾರದು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಕೊರೊನಾ ಲಸಿಕೆ ಪ್ರಾರಂಭ