Select Your Language

Notifications

webdunia
webdunia
webdunia
webdunia

ಆಟೋ ಚಾಲರಿಗೆ ನೈಟ್ ಕರ್ಫ್ಯೂ ನುಂಗಲಾರದ ಬಿಸಿ ತುಪ್ಪ

ಆಟೋ ಚಾಲರಿಗೆ ನೈಟ್ ಕರ್ಫ್ಯೂ ನುಂಗಲಾರದ ಬಿಸಿ ತುಪ್ಪ
ಬೆಂಗಳೂರು , ಸೋಮವಾರ, 27 ಡಿಸೆಂಬರ್ 2021 (15:46 IST)
ಒಮಿಕ್ರಾನ್ ಆತಂಕದ ಹಿನ್ನೆಲೆ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಸರ್ಕಾರದ ಈ ನಿರ್ಧಾರದ ಬಗ್ಗೆ ಆಟೋ & ಟ್ಯಾಕ್ಸಿ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂ ರೂಲ್ಸ್ ಎಫೆಕ್ಟ್ ನಿಂದ ಆಟೋದವರಿಗೆ ಸಂಕಷ್ಟ ಎದುರಾಗಿದ್ದು, ರಾತ್ರಿ ವೇಳೆ ಸಂಚರಿಸುತ್ತಿದ್ದ ಆಟೋದವರಿಗೆ ಈ ನಿರ್ಧಾರದಿಂದ ಸಮಸ್ಯೆಯಾಗುತ್ತೆ.ಕೊರೊನಾ ನಂತರ ದುಡಿಮೆ ಇಲ್ಲದೇ ಸಾಕಷ್ಟು ಚಾಲಕರು ರಾತ್ರಿ ಕೆಲಸ ಮಾಡ್ತಾರೆ. ಈ ನೈಟ್ ಕರ್ಪ್ಯೂನಿಂದ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿ ಸಮಯದಲ್ಲಿ ನಗರಕ್ಕೆ ಬರೊ ಗ್ರಾಹಕರ ಗತಿ ಏನು? ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸ್ತಿದೆ. ನೈಟ್ ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಿದ್ದೀರಾ.
 
ಹಾಗೇ ಆಟೋ ಮತ್ತು ಟ್ಯಾಕ್ಸಿಗಳಿಗೂ ಓಡಾಡಲು ಅವಕಾಶ ಮಾಡಿಕೊಡಬೇಕು. ಈ ಹಿಂದಿನ ಕೊರೊನಾ ಹೊಡೆತಕ್ಕೆ ಆಟೋ ಚಾಲಕರು ನಲುಗಿ ಹೋಗಿದ್ದಾರೆ. ಈಗಷ್ಟೇ ಚೇತರಿಕೆ ಕಾಣುತ್ತಿರುವ ಈ ಸಂದರ್ಭಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಆಟೋ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಮಾಲೀಕರ ಸಂಘ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸ್ ಯಲ್ಲಿ ಸಿಸಿಟಿವಿ ಅಳವಡಿಕೆ