Select Your Language

Notifications

webdunia
webdunia
webdunia
webdunia

ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿ ಆಟೋ ಚಾಲಕನ ದರೋಡೆ

ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿ ಆಟೋ ಚಾಲಕನ ದರೋಡೆ
bangalore , ಭಾನುವಾರ, 12 ಡಿಸೆಂಬರ್ 2021 (20:49 IST)
ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿ ಆಟೋ ಚಾಲಕನ ದರೋಡೆ ಮಾಡಿದ್ದ ನಾಲ್ವರನ್ನು ಬ್ಯಾಟರಾಯನಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ನಾಗೇಂದ್ರ (25), ದೊಡ್ಡವೀರೇಗೌಡ (29), ದರ್ಶನ್ (26), ಶಿವಕುಮಾರ್ (27) ಬಂಧಿತರು. 3 ಲಕ್ಷ ರೂ. ಮೌಲ್ಯದ 1 ಆಟೋರಿಕ್ಷಾ, 2 ಮೊಬೈಲ್ ಫೆÇೀನ್‍ಗಳು, 46 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಕೆಂಗೇರಿ, ಕನಕಪುರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ 1 ಸುಲಿಗೆ, 1 ಮನೆಗಳವು ಹಾಗೂ 1 ಸರಗಳವು ಪ್ರಕರಣ ಬೆಳಕಿಗೆ ಬಂದಿದೆ.
ಆಟೋ ಚಾಲಕ ಗಿರಿನಗರದ ಶಿವಕುಮಾರ್ ನ.17ರಂದು ಜಯನಗರ, ಬಸವನಗುಡಿಯಲ್ಲಿ ಬಾಡಿಗೆಗೆ ಆಟೋ ಓಡಿಸಿ ರಾತ್ರಿ 11 ಗಂಟೆಗೆ ಮನೆಗೆ ಹಿಂತಿರುಗುತ್ತಿದ್ದರು. ರಿಂಗ್ ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಪಕ್ಕದ ಬಸ್ ನಿಲ್ದಾಣದಲ್ಲಿ ನಾಲ್ವರು ಆರೋಪಿಗಳು ಆಟೋಗೆ ಕೈ ಹಿಡಿದು ಲಗ್ಗೆರೆಗೆ ಹೋಗಬೇಕು ಎಂದು ತಿಳಿಸಿ ಆಟೋ ಹತ್ತಿದ್ದರು. ನಾಯಂಡಹಳ್ಳಿ ಜಂಕ್ಷನ್ ಬಳಿ ಬಂದಾಗ ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅದರಂತೆ ನಾಯಂಡಹಳ್ಳಿಯ ಸ್ಲಂ ಕಡೆ ಶಿವಕುಮಾರ್ ಹೋಗುತ್ತಿದ್ದಾಗ ಏಕಾಏಕಿ ಆಟೋ ನಿಲ್ಲಿಸುವಂತೆ ಹೇಳಿ  ಶಿವಕುಮಾರ್ ಬಳಿಯಿದ್ದ 2 ಮೊಬೈಲ್, 9 ಸಾವಿರ ರೂ. ನಗದು, ಕಸಿದುಕೊಂಡು ಬಲವಂತವಾಗಿ ಅವರನ್ನು ಆಟೋದ ಹಿಂಬದಿಗೆ ಕೂರಿಸಿದ್ದಾರೆ.  ನಾಲ್ವರ ಪೈಕಿ ಓರ್ವ ಆಟೋ ಓಡಿಸಿಕೊಂಡು ನಾಯಂಡಹಳ್ಳಿ ಜಂಕ್ಷನ್ ಕಡೆ ಬಂದಿದ್ದ. ಅಲ್ಲಿ ನಿಂತಿದ್ದ ಪೆÇಲೀಸರನ್ನು ಕಂಡು ಶಿವಕುಮಾರ್ ಜೋರಾಗಿ ಕೂಗಿದಾಗ, ಅನುಮಾನಗೊಂಡು ಹೊಯ್ಸಳ ಸಿಬ್ಬಂದಿ ಆಟೋವನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಪೆÇಲೀಸರು ಬೆನ್ನಟ್ಟುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿಗಳು ಶಿವಕುಮಾರ್‍ನ್ನು ಬಲವಂತವಾಗಿ ಆಟೋದಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣೆ ಪೆÇಲೀಸರು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ತಾಂತ್ರಿಕ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಟ್ವಿಟರ್ ಖಾತೆ ಹ್ಯಾಕ್..!