Select Your Language

Notifications

webdunia
webdunia
webdunia
webdunia

ಮೋದಿ ಟ್ವಿಟರ್ ಖಾತೆ ಹ್ಯಾಕ್..!

Modi Twitter Account Hacked
bangalore , ಭಾನುವಾರ, 12 ಡಿಸೆಂಬರ್ 2021 (20:33 IST)
ಪ್ರಧಾನಿ ನರೇಂದ್ರ ಮೋದಿಯವರ  ಟ್ವಿಟರ್ ಹ್ಯಾಂಡಲ್ "ತೀರಾ ಅಲ್ಪಾವಧಿಗೆ ಹ್ಯಾಕ್ ಆಗಿತ್ತು" ಮತ್ತು ಆ ಬಳಿಕ ಇದೀಗ ಸುಭದ್ರವಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ (ಪಿಎಂಓ) ಬಹಿರಂಗಪಡಿಸಿದೆ.
"ಪ್ರಧಾನಿ ನರೇಂದ್ರಮೋದಿಯವರ ಟ್ವಿಟರ್ ಹ್ಯಾಂಡಲ್ ತೀರಾ ಅಲ್ಪಾವಧಿಗೆ ಹ್ಯಾಕ್ ಆಗಿತ್ತು. ಈ ವಿಷಯವನ್ನು ತಕ್ಷಣ ಟ್ವಿಟರ್ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಖಾತೆಯನ್ನು ಸುರಕ್ಷಿತವಾಗಿ ಮಾಡಲಾಯಿತು. ಹ್ಯಾಕ್ ಆದ ಅಲ್ಪಾವಧಿಯಲ್ಲಿ ಶೇರ್ ಆದ ಟ್ವೀಟ್‍ಗಳನ್ನು ಕಡೆಗಣಿಸಬೇಕು" ಎಂದು ಪಿಎಂಓ ಟ್ವೀಟ್ ಮಾಡಿದೆ.
ಪಿಎಂ ಮೋದಿ ಖಾತೆಗೆ 73.4 ದಶಲಕ್ಷ ಅನುಯಾಯಿಗಳಿದ್ದು, ಇದೀಗ ಖಾತೆ ಮರುಸ್ಥಾಪನೆಯಾಗಿದ್ದು, ದುರುದ್ದೇಶಪೂರಿತ ಟ್ವೀಟ್‍ಗಳನ್ನು ಕಿತ್ತುಹಾಕಲಾಗಿದೆ.
"ಭಾರತ ಅಧಿಕೃತವಾಗಿ ಬಿಟ್‍ಕಾಯಿನ್ ಅನ್ನು ಕಾನೂನುಬದ್ಧ ವಿನಿಮಯವಾಗಿ ಸ್ವೀಕರಿಸಿದೆ" ಎಂದು ಪಿಎಂ ಮೋದಿ ಖಾತೆಯಿಂದ ಆದ ಟ್ವೀಟ್‍ನ ಸ್ಕ್ರೀನ್‍ಶಾಟ್‍ಗಳನ್ನು ಹಲವು ಮಂದಿ ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿದ್ದರು.
"ಭಾರತ ಅಧಿಕರತವಾಗಿ ಬಿಟ್‍ಕಾಯಿನ್ ಅನ್ನು ಕಾನೂನುಬದ್ಧ ವಿನಿಮಯ ಸಾಧನವಾಗಿ ಸ್ವೀಕರಿಸಿದೆ. ಸರ್ಕಾರ ಅಧಿಕೃತವಾಗಿ 500 ಬಿಟಿಸಿಗಳನ್ನು ತಂದಿದ್ದು, ದೇಶದ ಎಲ್ಲ ನಿವಾಸಿಗಳಿಗೆ ವಿತರಿಸುತ್ತಿದೆ" ಎಂದು ಈಗ ಡಿಲೀಟ್ ಮಾಡಿರುವ ಟ್ವೀಟ್‍ನಲ್ಲಿ ಹೇಳಲಾಗಿತ್ತು.
ತಕ್ಷಣವೇ #ಹ್ಯಾಕ್ಡ್ ಹ್ಯಾಷ್‍ಟ್ಯಾಗ್ ಭಾರತದಲ್ಲಿ ಟ್ರೆಂಡಿಂಗ್ ಆಯಿತು. "ಗುಡ್‍ಮಾರ್ನಿಂಗ್ ಮೋದಿ ಜಿ, ಸಬ್ ಚಂಗಾ ಸಿ?" ಎಂದು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ.ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ಕಾಂಗ್ರೆಸ್ ವಿರೋಧ ವಿಶೇಷವಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ