ಕೊರೊನಾ ಎರಡನೇ ಅಲೆಯ ನಂತರ ರೈಲ್ವೆ ಇಲಾಖೆ ತನ್ನ ಸೇವೆಯಲ್ಲಿ ಹಲವು ಬದಲಾವಣೆ ಮಾಡಿತ್ತು.
ಇದೀಗ ಜನಜೀವನ ಸಹಜಸ್ಥಿತಿಗೆ ಬರುತ್ತಿರುವುದರಿಂದ ತನ್ನ ಹಳೆಯ ಸೇವೆಗಳನ್ನು ಮರುಪ್ರಾರಂಭಹಗೊಳಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಅದು ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಬೇಯಿಸಿದ ಊಟದ ಸೇವೆಯನ್ನು ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಸಾಂಕ್ರಾಮಿಕ ರೋಗದ ಕಾತರಣದಿಂದ ಹೇರಲಾಗಿದ್ದ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗಿರುವುದರಿಂದ, ಸೇವೆಗಳನ್ನು ಪುನಃಸ್ಥಾಪಿಸಿ, ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಊಟವನ್ನು ಪುನರಾರಂಭಿಸಲು ರೈಲ್ವೆ ಮಂಡಳಿಯು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವನ್ನು ಪತ್ರದಲ್ಲಿ ಕೇಳಿದೆ.
ರೈಲ್ವೆ ಸೇವೆಗಳನ್ನು ಈ ಹಿಂದಿನಂತೆ ನೀಡಲು ಪ್ರಯಾಣಿಕರಿಗೆ ಆಹಾರದ ಸೇವೆಯಲ್ಲಿ ಹೇರಲಾಗಿದ್ದ ನಿಯಮಗಳನ್ನು ಸಡಿಲಗೊಳಿಸಲು ಇಲಾಖೆ ನಿರ್ಧರಿಸಿದೆ. ಆದ್ದರಿಂದ ಪ್ರಯಾಣಿಕರಿಗೆ ಇನ್ನು ಮುಂದೆ ಬೇಯಿಸಿದ ಆಹಾರ ಈ ಮೊದಲಿನಂತೆ ಪ್ರಯಾಣದ ವೇಳೆ ಲಭ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ವೇಳೆ ಸಿದ್ಧ ಆಹಾರದ ಸೇವೆ ಈಗಿನಂತೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಲಾಗಿದೆ.