Publish Date: Thu, 05 Sep 2019 (09:01 IST)
Updated Date: Thu, 05 Sep 2019 (09:03 IST)
ಬೆಂಗಳೂರು: ಕಿರುತೆರೆ ಮತ್ತು ಹಿರಿತೆರೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಡಿಂಪಲ್ ಹುಡುಗ ವಿಜಯ್ ಸೂರ್ಯ ಈಗ ಸರ್ಕಾರಿ ಶಾಲೆಗಳ ಪರವಾಗಿ ಮಾತನಾಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ, ಸರ್ಕಾರಿ ಶಾಲೆಗಳು ಈಗ ಹಿಂದಿನಂತಿಲ್ಲ ಎಂದು ಸುದೀರ್ಘ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ದೊಡ್ಡ ದೊಡ್ಡ ಹೆಸರು ಮಾಡಿದ್ದಾರೆ. ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈಗ ಸರ್ಕಾರಿ ಶಾಲೆಗಳು ಹಿಂದಿನಂತಿಲ್ಲ. ಅಭಿವೃದ್ಧಿಯಾಗುತ್ತಿವೆ. ಸರ್ಕಾರ ಕೂಡಾ ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ಇದಕ್ಕೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಬೆಂಬಲಿಸಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿ ನಮ್ಮ ಕೈಯಲ್ಲೇ ಇದೆ. ಆದಷ್ಟು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರದ ಜತೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.