Select Your Language

Notifications

webdunia
webdunia
webdunia
webdunia

ಹೊಸ ದಾಖಲೆ ಮಾಡಲು ಹೊರಟಿದೆ ವಿಜಯ್ ರಾಘವೇಂದ್ರ ಸಿನಿಮಾ

ಹೊಸ ದಾಖಲೆ ಮಾಡಲು ಹೊರಟಿದೆ ವಿಜಯ್ ರಾಘವೇಂದ್ರ ಸಿನಿಮಾ
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (10:34 IST)
ಬೆಂಗಳೂರು: ಸಾಮಾನ್ಯವಾಗಿ ಸಿನಿಮಾ ಮೊದಲು ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಬಳಿಕ ಕಿರುತೆರೆಯಲ್ಲಿ ಪ್ರಸಾರವಾಗುತ್ತದೆ. ಆದರೆ ವಿಜಯ್ ರಾಘವೇಂದ್ರ ನಾಯಕರಾಗಿರುವ ಈ ಸಿನಿಮಾ ಈ ಲೆಕ್ಕಾಚಾರವನ್ನು ಉಲ್ಟಾ ಪಲ್ಟಾ ಮಾಡಿದೆ.

 

ವಿಜಯ್ ನಟಿಸಿರುವ ‘ಸೀತಾರಾಮ್ ಬಿನೋಯ್’ ಸಿನಿಮಾ ಆಗಸ್ಟ್ 15 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಮೂಲಕ ತೆರೆ ಕಾಣಲಿದೆ. ಇದಾದ ಬಳಿಕ ಮರುದಿನದಿಂದ ಅಂದರೆ ಆಗಸ್ಟ್ 16 ರಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

ಈ ಮೂಲಕ ಕಿರುತೆರೆಯಲ್ಲೇ ನೇರವಾಗಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದುವರೆಗೆ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುವ ಟ್ರೆಂಡ್ ಇತ್ತು. ಆದರೆ ಕಿರುತೆರೆಯಲ್ಲೇ ಬಿಡುಗಡೆಯಾಗುತ್ತಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೆಲ್ಲಲು ವೈಷ್ಣವಿಗೆ ನಟಿ ಅಮೂಲ್ಯ ಸಹಾಯ