Select Your Language

Notifications

webdunia
webdunia
webdunia
webdunia

ಎರಡನೇ ಬಾರಿಗೆ ಪವರ್ ಸ್ಟಾರ್ ಪುನೀತ್ ಗೆ ಜೋಡಿಯಾಗಲಿದ್ದಾರೆ ತ್ರಿಷಾ ಕೃಷ್ಣನ್

ಎರಡನೇ ಬಾರಿಗೆ ಪವರ್ ಸ್ಟಾರ್ ಪುನೀತ್ ಗೆ ಜೋಡಿಯಾಗಲಿದ್ದಾರೆ ತ್ರಿಷಾ ಕೃಷ್ಣನ್
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (10:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ‘ದ್ವಿತ’ ಸಿನಿಮಾಗೆ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗುವುದು ಪಕ್ಕಾ ಆಗಿದೆ.

 

ಈ ಮೊದಲು ಪುನೀತ್ ಜೊತೆ ಪವರ್ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ಅಭಿನಯಿಸಿದ್ದರು. ಇದಾದ ಬಳಿಕ ಕನ್ನಡದಲ್ಲಿ ಸಿನಿಮಾದಲ್ಲಿ ಮತ್ತು ಪುನೀತ್ ಗೆ ಎರಡನೇ ಬಾರಿಗೆ ಬರಲಿದ್ದಾರೆ.

ತ್ರಿಷಾ ನಾಯಕಿಯಾಗುವುದರ ಬಗ್ಗೆ ಈಗಾಗಲೇ ಸುದ್ದಿ ಹಬ್ಬಿತ್ತು. ಈಗ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಣೆ ನೀಡಿದೆ. ಪವನ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಪ್ರತಿಭಾವಂತರ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ ಎಂದು ತ್ರಿಷಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನಕ್ಕೆ ಧ್ರುವ ಸರ್ಜಾ ಹೊಸ ಸಿನಿಮಾ ಟೈಟಲ್ ರಿವೀಲ್