ಬರೀ ಸಿನಿಮಾದವರೇ ವೀಕೆಂಡ್ ಆಯ್ತು ಎಂಬ ದೂರಿಗೆ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?

Webdunia
ಭಾನುವಾರ, 2 ಜೂನ್ 2019 (09:23 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೇವಲ ಸಿನಿಮಾದವರೇ ಬರುತ್ತಿದ್ದಾರೆ ಎಂಬ ವೀಕ್ಷಕರ ಆರೋಪಗಳಿಗೆ ನಿರೂಪಕ ರಮೇಶ್ ಅರವಿಂದ್ ಉತ್ತರ ನೀಡಿದ್ದಾರೆ.


ಈ ವಾರ ಜೀ ಕನ್ನಡ ವಾಹಿನಿಯಲ್ಲಿ ಕನ್ನಡ ನಾಡೇ ಹೆಮ್ಮೆ ಪಡುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಎಪಿಸೋಡ್ ಪ್ರಸಾರವಾಗುತ್ತಿದೆ. ಇನ್ ಫೋಸಿಸ್ ಎಂಬ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿ ತಮ್ಮ ಕತೆ ಹೇಳುತ್ತಿರುವುದಕ್ಕೆ ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ನಡುವೆ ತಮ್ಮ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವ ರಮೇಶ್ ಅರವಿಂದ್, ನಮ್ಮ ಕಾರ್ಯಕ್ರಮ ಕೇವಲ ಸಿನಿಮಾದವರ ಕಾರ್ಯಕ್ರಮವಾಗುತ್ತಿದೆ ಎಂದು ಬಹಳಷ್ಟು ಜನ ಆರೋಪಿಸುತ್ತಾರೆ. ಆದರೆ ಈ ಕಾರ್ಯಕ್ರಮಕ್ಕೆ ಸಿನಿಮಾ ಹೊರತಾಗಿ ಬೇರೆ ರಂಗದ ಸಾಧಕರನ್ನು ಕರೆತರಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದೇವೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬರಬೇಕು ಎಂದು ಬಹಳ ಪ್ರಯತ್ನ ಪಟ್ಟಿದ್ದೇವೆ.

ಅಂತೂ ಈಗ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರನ್ನು ಕರೆತರಲು ಯಶಸ್ವಿಯಾಗಿದ್ದೇವೆ. ಅವರ ಒಂದೊಂದು ಮಾತೂ ನಮಗೆ ಸ್ಪೂರ್ತಿ ಎಂದು ರಮೇಶ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಮಗೆ ನ್ಯಾಯ ಒದಗಿಸುತ್ತಾರೆಂಬ ನಂಬಿಕೆಯಿದೆ: ತ್ವಿಷಾ ಶರ್ಮಾ ಸಾವಿನ ಬಗ್ಗೆ ತಂದೆ ನವನಿಧಿ ಶರ್ಮಾ

ರುಕ್ಮಿಣಿ ವಸಂತ್ ಬಿಕಿನ ಫೋಟೋ ಹಿಂದಿನ ಅಸಲಿಯತ್ತು ಬೇರೆನೇ

ತ್ವಿಶಾ ಶರ್ಮಾ ಸಾವು ಪ್ರಕರಣ: ನಾಪತ್ತೆಯಾಗಿದ್ದ ಸಮರ್ಥ್‌ ಸಿಂಗ್ ಶರಣು

ತಾಳಿ, ಸಿಂಧೂರದಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರನೌತ್‌,ಮದುವೆ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದು ಹೀಗೇ

ನಟಿ ಟ್ವಿಶಾ ಶರ್ಮಾ ಸಾವು ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು: ಕೊನೆಗೂ ಎಂಟ್ರಿಯಾದ ಸಿಬಿಐ

ಮುಂದಿನ ಸುದ್ದಿ
Show comments