Publish Date: Wed, 27 Mar 2024 (09:49 IST)
Updated Date: Wed, 27 Mar 2024 (10:03 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಅದಕ್ಕೆ ಕಾರಣ ಇದೀಗ ನಡೆಯುತ್ತಿರುವ ಎಪಿಸೋಡ್ ನಲ್ಲಿ ನಾಯಕಿ ಮಾಡುತ್ತಿರುವ ಸಾಹಸಗಳು.
ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಜಿಯವರ ಧಾರವಾಹಿಯಲ್ಲಿ ಈಗ ಕಥಾನಾಯಕ ರಾಮಚಾರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆಶ್ರಮದಲ್ಲಿ ಗುರೂಜಿಯೊಬ್ಬರು ಆತನಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಹಾಗಿದ್ದರೂ ಆತ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನ ತರಬೇಕು ಎಂದು ಆದೇಶಿಸುತ್ತಾರೆ. ಆದರೆ ದಟ್ಟ ಕಾಡಿನಲ್ಲಿ, ಕಾಡು ಪ್ರಾಣಿಗಳಿರುವ ಕಡೆ ರಾತ್ರಿ ಸಂಚಾರ ಮಾಡಿ ಜ್ಯೋತಿ ತರುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ.
ಹಾಗಿದ್ದರೂ ಗಂಡನ ರಾಮಚಾರಿ ಪತ್ನಿ, ಕಥಾನಾಯಕಿ ಚಾರುಲತಾ ದಟ್ಟ ಕಾಡಿನಲ್ಲಿ ಟಾರ್ಚ್ ಹಿಡಿದುಕೊಂಡು ರಾತ್ರಿ ವೇಳೆ ಸಂಚಾರ ಆರಂಭಿಸುತ್ತಾಳೆ. ಚಾರು ಪಾತ್ರಧಾರಿಯ ಈ ಅವತಾರ ನೋಡಿ ನೆಟ್ಟಿಗರು ಈ ಹಿಂದೆ ಇದೇ ರಾಮ್ ಜಿ ನಿರ್ದೇಶನದಲ್ಲಿ ಮೂಡಿಬಂದ ಪುಟ್ಟಗೌರಿ ಧಾರವಾಹಿಯಲ್ಲಿ ಕಥಾನಾಯಕಿಯ ಇದೇ ರೀತಿಯ ಸಾಹಸಗಳನ್ನು ಮಾಡಿದ್ದನ್ನು ನೆನೆಸಿಕೊಂಡಿದ್ದಾರೆ.
ರಾಮ್ ಜಿ ಧಾರವಾಹಿಗಳೆಂದರೆ ಇಂತಹ ಹೈಪ್ ಗಳೆಲ್ಲಾ ಕಾಮನ್. ಸತ್ತವರು ಎದ್ದು ಬರೋದು, ಬದುಕಿದ್ದವರು ಸಾಯೋದು ಎಲ್ಲಾ ಕಾಮನ್. ಜೊತೆಗೆ ನಾಯಕಿ ಈಗ ದಟ್ಟಾರಣ್ಯದಲ್ಲಿ ಕಾಡು ಪ್ರಾಣಿಗಳ ಜೊತೆ ಹೋರಾಡುವ ದೃಶ್ಯವೂ ಇರಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ.