ಬೆಂಗಳೂರು: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಖಡಕ್ ವಿಲನ್ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟ ಆಶಿಷ್ ವಿದ್ಯಾರ್ಥಿ ಈಗ ಅವಕಾಶಕ್ಕಾಗಿ ಮೊರೆಯಿಡುತ್ತಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ 61 ವರ್ಷದ ಆಶಿಷ್ ವಿದ್ಯಾರ್ಥಿ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಇದಕ್ಕೆ ಅವಕಾಶಗಳ ಕೊರತೆಯೇ ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸುಮಾರು 11 ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಪ್ರತಿಭಾವಂತ ನಟನಿಗೆ ಈಗ ಅವಕಾಶವೇ ಸಿಗುತ್ತಿಲ್ಲವಂತೆ.
ಕಳೆದ ವರ್ಷ 60 ನೇ ವರ್ಷದಲ್ಲಿ ರೂಪಾಲಿ ಬರುವ ಎಂಬವರ ಜೊತೆ ಆಶಿಷ್ ವಿದ್ಯಾರ್ಥಿ ಮದುವೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಈ ಇಳಿ ವಯಸ್ಸಿನಲ್ಲಿ ಮದುವೆಯಾಗಿದ್ದಕ್ಕೆ ಕೆಲವರು ಟ್ರೋಲ್ ಮಾಡಿದರೆ ಮತ್ತೆ ಕೆಲವರು ಇಳಿವಯಸ್ಸಿನಲ್ಲಿ ಸಂಗಾತಿಯ ಅಗತ್ಯವಿದೆ ಎಂದು ಸಮರ್ಥಿಸಿಕೊಂಡಿದ್ದರು.
ಇದೀಗ ಆಶಿಷ್ ವಿದ್ಯಾರ್ಥಿ ಇತ್ತೀಚೆಗಿನ ದಿನಗಳಲ್ಲಿ ತಮಗೆ ಯಾರೂ ಅವಕಾಶ ಕೊಡುತ್ತಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರ ಮಾಡಿದ್ದೇನೆ. ಆದರೂ ನನಗೆ ಕೆಲಸ ಕೊಡುತ್ತಿಲ್ಲ. ದಯವಿಟ್ಟು ನನಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.