Select Your Language

Notifications

webdunia
webdunia
webdunia
webdunia

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ದೇವರ ದರ್ಶನ ಪಡೆದ ನಟ ರಕ್ಷಿತ್ ಶೆಟ್ಟಿ

Rakshith Shetty

Sampriya

ಬೆಳ್ತಂಗಡಿ , ಮಂಗಳವಾರ, 26 ಮಾರ್ಚ್ 2024 (19:35 IST)
Photo Courtesy
ಬೆಳ್ತಂಗಡಿ: ಕನ್ನಡದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈಚೆಗೆ ರಿಷಬ್ ಶೆಟ್ಟಿ ಅವಬರು ತಮ್ಮ ಮನೆತನದ ದೈವರಾಧನೆಯಲ್ಲಿ ಪಾಲ್ಗೊಂಡಿದ್ದರು. ಅದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸುರ್ಯ ದೇವಸ್ಥಾನದ ಭೇಟಿ ವೇಳೆ  ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯ ಗುತ್ತು ರಕ್ಷಿತ್ ಶೆಟ್ಟಿ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಿ ಶುಭ ಹಾರೈಸಿದರು.

ಡಾ. ಸಂಪ್ರತಿ ವೈಶಾಖ್ ಸುರ್ಯ ಗುತ್ತು, ಶಶಿಧರ್ ಶೆಟ್ಟಿ ಬರೋಡಾ ನವಶಕ್ತಿ, ರವಿ ಚಕ್ಕಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಕಾಂಡ ಸಿನಿಮಾಗೂ ಕೈಕೊಟ್ಟ ನಟಿ ರಮ್ಯಾ