ರಿಯಾಲಿಟಿ ಶೋಗೆ ಬಂದ ಪುನೀತ್ ರಾಜ್ ಕುಮಾರ್: ಅಪ್ಪು ನೋಡಿ ಇಡೀ ಸೆಟ್ ಕಣ್ಣೀರು

Krishnaveni K
ಗುರುವಾರ, 25 ಜುಲೈ 2024 (10:42 IST)
Photo Credit: Instagram
ಬೆಂಗಳೂರು: ಕನ್ನಡದಲ್ಲಿ ಗತಿಸಿ ಹೋದ ನಟರ ಪೈಕಿ ಛೇ ಅವರು ಒಮ್ಮೆ ನಮ್ಮ ಕಣ್ಣ ಮುಂದೆ ಬರಬೇಕಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುವ ಏಕೈಕ ನಟ ಎಂದರೆ ಪುನೀತ್ ರಾಜ್ ಕುಮಾರ್ ಇರಬಹುದು. ಅಭಿಮಾನಿಗಳ ಪ್ರೀತಿಯ ಅಪ್ಪು ಈಗ ರಿಯಾಲಿಟಿ ಶೋ ಮೂಲಕ ಬರುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮತ್ತು ಮಹಾನಟಿ ಸಂಗಮದಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಕರೆತರಲಾಗಿದೆ. ಸ್ಕಿಟ್ ಒಂದರಲ್ಲಿ ಟೈಮ್ ಮಿಷನ್ ಹಿಂದೆ ಮಾಡಿ ಸ್ಪರ್ಧಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆತರುವಂತೆ ಸನ್ನಿವೇಶವೊಂದನ್ನು ಸೃಷ್ಟಿಸಲಾಗಿದೆ.

ಈ ವೇಳೆ ಥೇಟ್ ಪುನೀತ್ ಪಾತ್ರಧಾರಿ ವೇದಿಕೆ ಎಂಟ್ರಿ ಕೊಡುತ್ತಾರೆ. ಥೇಟ್ ಪುನೀತ್ ನಂತೇ ಹಾವಭಾವ, ಫೇಸ್ ಕಟ್, ಧ್ವನಿ ಮಾಡಿಕೊಂಡು ವೇದಿಕೆಗೆ ಬಂದಾಗ ಸೆಟ್ ನಲ್ಲಿದ್ದವರೆಲ್ಲರೂ ಕಣ್ಣೀರಾಗುತ್ತಾರೆ. ಆಂಕರ್ ಅನುಶ್ರೀಯಂತೂ ಕಣ್ಣೀರು ಹಾಕುತ್ತಲೇ ಇಡೀ ಶೋ ವೀಕ್ಷಿಸಿದ್ದಾರೆ.

ಇನ್ನು, ಪುನೀತ್ ರನ್ನೇ ಹೋಲುವ ವ್ಯಕ್ತಿಯ ಪ್ರೋಮೋವನ್ನು ವಾಹಿನಿ ಪ್ರಸಾರ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರೂ ಭಾವುಕರಾಗಿದ್ದಾರೆ. ನಿಜವಾಗಿಯೂ ಈ ರೀತಿ ನಡೆದು ಒಮ್ಮೆ ಪುನೀತ್ ನಮ್ಮ ಎದುರು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಸೆಪಟ್ಟಿದ್ದಾರೆ. ಬಳಿಕ ಪುನೀತ್ ರಂತೇ ನೃತ್ಯ ಮಾಡಿ ಅಲ್ಲಿದ್ದವರನ್ನು ರಂಜಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಶಿರಡಿ ಸಾಯಿಬಾಬಾಗೆ ಕೊಡುಗೆ ನೀಡಿ, ಕಾರಣ ಬಿಚ್ಚಿಟ್ಟ ಕನಸಿನ ರಾಣಿ ಮಾಲಾಶ್ರೀ

ಮುಂದಿನ ಸುದ್ದಿ
Show comments