ದರ್ಶನ್ ಸೇವ್ ಮಾಡಲು ಡಿಕೆ ಶಿವಕುಮಾರ್ ಜೊತೆ ನಡೆದಿದೆಯಾ ರಹಸ್ಯ ಮಾತುಕತೆ

Krishnaveni K
ಗುರುವಾರ, 25 ಜುಲೈ 2024 (09:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ರನ್ನು ಕಾಪಾಡಲು ನಿನ್ನೆ ವಿಜಯಲಕ್ಷ್ಮಿ ದರ್ಶನ್ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ವೇಳೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಮತ್ತು ನಿರ್ದೇಶಕ ಪ್ರೇಮ್ ನಿನ್ನೆ ಡಿಕೆ ಶಿವಕುಮಾರ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ದರ್ಶನ್ ಪುತ್ರ ವಿನೀಶ್ ಶಾಲೆ ಅಡ್ಮಿಷನ್ ವಿಚಾರವಾಗಿ ಭೇಟಿಯಾಗಿದ್ದಾಗಿ ನಿರ್ದೇಶಕ ಪ್ರೇಮ್ ನೆಪ ಹೇಳಿದ್ದರು.

ಇನ್ನು ಡಿಕೆ ಶಿವಕುಮಾರ್ ಕೂಡಾ ಮಾಧ್ಯಮಗಳ ಜೊತೆ ಮಾತನಾಡುವಾಗ ನಾನು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಆಗಲ್ಲ ಎಂದು ಹೇಳಿದ್ದೇನೆ. ಕಾನೂನಿ ರೀತಿಯಲ್ಲೇ ಎಲ್ಲವೂ ನಡೆಯಲಿದೆ. ಮಗನ ಅಡ್ಮಿಷನ್ ಗೆ ಸಹಾಯ ಮಾಡಬೇಕು ಎಂದರು. ಅದನ್ನು ನಾನು ಪ್ರಿನ್ಸಿಪಾಲ್ ಜೊತೆ ಮಾತನಾಡಿ ಬಗೆಹರಿಸುತ್ತೇನೆ ಎಂದಿದ್ದರು.

ಆದರೆ ಇಲ್ಲಿ ಕೇವಲ ಮಗನ ಅಡ್ಮಿಷನ್ ವಿಚಾರ ಮಾತ್ರವಲ್ಲ, ದರ್ಶನ್ ರನ್ನು ಕಾಪಾಡುವ ಕುರಿತೂ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ದರ್ಶನ್ ವಿಚಾರಣೆ ವೇಳೆ ನಾನು ಹೊಡೆದಿಲ್ಲ ಎಂದು ಹೇಳಿರುವುದಾಗಿ ವಿಜಯಲಕ್ಷ್ಮಿ ಡಿಸಿಎಂಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲಿ ದರ್ಶನ್ ರನ್ನು ಸೇವ್ ಮಾಡಲು ಸಹಾಯ ಮಾಡಿ ಎಂದಿದ್ದಾರಂತೆ.

ಅದಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೂ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆಸಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಕೇವಲ ಮಗನ ಅಡ್ಮಿಷನ್ ಗಾಗಿ ವಿಜಯಲಕ್ಷ್ಮಿ, ಪ್ರೇಮ್ ಮತ್ತು ದಿನಕರ್ ಡಿಸಿಎಂರನ್ನು ಮನೆಗೆ ಬಂದು ಭೇಟಿ ಮಾಡಿ ಅಷ್ಟು ಹೊತ್ತು ಮಾತುಕತೆ ನಡೆಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments