ರಾತ್ರಿ ವೇಳೆ ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತೆ?!

Webdunia
ಶುಕ್ರವಾರ, 5 ಮಾರ್ಚ್ 2021 (11:33 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಆರಂಭವಾಗಿ ವಾರ ಕಳೆದಿದೆಯಷ್ಟೇ. ಆದರೆ ಆಗಲೇ ಸ್ಪರ್ಧಿಗಳ ನಡುವೆ ಅಸಮಾಧಾನಗಳು ಹೊಗೆಯಾಡುತ್ತಿವೆ.


ಅದರಲ್ಲೂ ತಾವಾಗಿಯೇ ನಾಮಿನೇಷನ್ ಮೈಮೇಲೆಳದುಕೊಂಡ ನಿರ್ಮಲಾ ಮೇಲೆ ಸಹಸ್ಪರ್ಧಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಒಬ್ಬರೇ ಇರ್ತಾರೆ, ಜೊತೆಯಲ್ಲಿ ಕೂತು ಊಟ ಮಾಡಲ್ಲ, ಎಲ್ಲರೂ ತಮ್ಮನ್ನು ಕರೆಯುವ ಹಾಗೆ ಬೇಕೆಂದೇ ಮಾಡಿಕೊಳ್ಳುತ್ತಾರೆ ಇತ್ಯಾದಿ ಅವರ ಮೇಲಿನ ಆರೋಪಗಳು.

ಸಾಲದೆಂಬಂತೆ ಇದೀಗ ನಾಮಿನೇಷನ್ ಪ್ರಕ್ರಿಯೆ ಹತ್ತಿರಬರುತ್ತಿದ್ದಂತೇ ರಾತ್ರಿ ವೇಳೆ ಮೇಕಪ್ ಹಾಕಿಕೊಂಡು ಅಜ್ಜಿ ಸೀರೆ ಧರಿಸಿಕೊಂಡು ಒಬ್ಬೊಬ್ಬರೇ ಮಾತನಾಡುತ್ತಿರುವುದು ಇತರರಿಗೆ ಭಯವುಂಟು ಮಾಡಿದೆ. ಕ್ಯಾಪ್ಟನ್ ಬ್ರೋ ಗೌಡ, ನಿರ್ಮಲಾ ನೋಡಿ ತಲೆಕೆಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಇದೆಲ್ಲಾ ಅವರು ನಾಮಿನೇಷನ್ ನಿಂದ ಪಾರಾಗಲು ಮಾಡುತ್ತಿರುವ ತಂತ್ರವಾ? ಎಲ್ಲರ ಏಕಾಗ್ರತೆಯನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವಾ ಎಂಬ ಅನುಮಾನ ಮೂಡುತ್ತಿದೆ.  ಅವರ ‘ರಾ...ರಾ.. ಲುಕ್’ ಇತರ ಸ್ಪರ್ಧಿಗಳಲ್ಲಿ ಆತಂಕವುಂಟು ಮಾಡಿರುವುದಂತೂ ನಿಜ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ
Show comments